ಹೆಚ್1ಎನ್1 ನಿಂದ ಬಳಲುತ್ತಿದ್ದ ಯುವ ಪತ್ರಕರ್ತೆ ಅರ್ಚನಾ ಗುಂಡ್ಮಿ ಸಾವು…

201
firstsuddi

ಉಡುಪಿ : ಹೆಚ್1ಎನ್1 ನಿಂದ ಬಳಲುತ್ತಿದ್ದ ಯುವ ಪತ್ರಕರ್ತೆ ಅರ್ಚನಾ ಗುಂಡ್ಮಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಅರ್ಚನಾ ಅವರು ಬ್ರಹ್ಮಾವರ ತಾಲ್ಲೂಕು ಸಸ್ತಾನ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದ್ದು, ಮೃತ ಅರ್ಚನಾ ಅವರನ್ನು 18ದಿನಗಳ ಹಿಂದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಅವರು ಮೂರು ತಿಂಗಳ ಗರ್ಭಿಣಿಯಾಗಿದ್ದು, ಈ ವೇಳೆ ಹೆಚ್1ಎನ್1 ಬಂದರೆ ಅಪಾಯ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ. ಆರಂಭದಲ್ಲೇ ಹೆಚ್1ಎನ್1 ಎಂದು ವೈಧ್ಯರು ಖಚಿತಪಡಿಸಿಲ್ಲ ಹೀಗಾಗಿ ವೈಧ್ಯರ ನಿರ್ಲಕ್ಷದಿಂದ ಮೃತಪಟ್ಟಿದ್ದಾರೆ ಎಂದು ಮೃತ ಅರ್ಚನಾ ಅವರ ಸಂಬಂಧಿಕರು ಆರೋಪಿಸುತ್ತಿದ್ದು, ಘಟನೆ ಉಡುಪಿಯ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.