ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ…

68
firstsuddi

ತೆಲುಗಿನ ಖ್ಯಾತ ನಟ ರಾಮ್ ಚರಣ್ ಹಾಗೂ ಉಪಾಸನಾ ದಂಪತಿಗೆ ಹೆಣ್ಣು ಮಗುವಾಗಿದೆ. ಹೈದರಾಬಾದ್ ನ ಜುಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಅವರಿಗೆ ನಿಮ್ಮ ಹಾರೈಕೆ ಇರಲಿ ಎಂದು ರಾಮ್ ಚರಣ್ ತಿಳಿಸಿದ್ದಾರೆ.

ರಾಮ್ ಮತ್ತು ಉಪಾಸನಾ 2012ರ ಜೂನ್ 14ರಂದು ವಿವಾಹವಾದರು. ಕೆಲವು ದಿನಗಳ ಹಿಂದೆ ಉಪಾಸನಾ ಮತ್ತು ರಾಮ್ ಚರಣ್ 11ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಕಳೆದ ವರ್ಷ ಅವರ ಮದುವೆಯ ವಾರ್ಷಿಕೋತ್ಸವದ ನಂತರ, ದಂಪತಿ ಕುಟುಂಬವನ್ನು ಪ್ರಾರಂಭಿಸುವ ಬಯಕೆ ಘೋಷಿಸಿದರು. ಡಿಸೆಂಬರ್ 12, 2022 ರಂದು, ದಂಪತಿ ಪೋಷಕರಾಗಲಿರುವ ವಿಷಯವನ್ನು ಘೋಷಿಸಿದರು. 

ನಿನ್ನೆಯಷ್ಟೇ ತಮ್ಮ ಕುಟುಂಬದ ಕುಡಿಗಾಗಿ ಶಾಪಿಂಗ್ ಮಾಡುತ್ತಿರುವ ವಿಷಯವನ್ನು ಹಾಗೂ ಪ್ರಜ್ವಲ್ ಫೌಂಡೇಶನ್ ತಮ್ಮ ಮಗುವಿಗಾಗಿ ಸ್ಪೆಷಲ್ ತೊಟ್ಟಿಲನ್ನು ಗಿಫ್ಟ್ ನೀಡಿರುವುದಾಗಿ ಉಪಾಸನಾ ತಿಳಿಸಿದ್ದರು. ಪ್ರಜ್ವಲ್ ಫೌಂಡೇಶನ್ ನಲ್ಲಿ ಕೆಲಸ ಮಾಡುವ ಮಹಿಳೆಯರೇ ಈ ಸ್ಪೆಷಲ್ ತೊಟ್ಟಿಲನ್ನು ರೆಡಿ ಮಾಡಿದ್ದು, ಅದು ಮರದ ತೊಟ್ಟಿಲಾಗಿದೆ. ಉಪಾಸನಾ ಮಗುವಿಗಾಗಿಯೇ ಅದನ್ನು ಸಿದ್ಧ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಅದೊಂದು ತೂಗು ತೊಟ್ಟಿಲಾಗಿದ್ದು ಕುಸುರಿ ಕೆಲಸವನ್ನೂ ಹೊಂದಿದೆ.