ಹೊಸ ವರ್ಷದ ದಿನದಂದೇ ಲಿಫ್ಟ್ ಕುಸಿದು ಬಿದ್ದು ಉದ್ಯಮಿ ಸೇರಿ 6ಮಂದಿ ಸಾವು…

260
firstsuddi

ಇಂದೋರ್ : ಹೊಸ ವರ್ಷದ ದಿನದಂದೇ ಲಿಫ್ಟ್ ಕುಸಿದು ಬಿದ್ದು ಉದ್ಯಮಿ ಸೇರಿ ಒಟ್ಟು 6ಮಂದಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದಿದೆ. ಮಧ್ಯಪ್ರದೇಶದ ಉದ್ಯಮಿ ಪುನೀತ್ ಅಗರ್ವಾಲ್(53) ಅವರು ತಮ್ಮ ಫಾರ್ಮ್ ಹೌಸ್‍ನಲ್ಲಿ ಗೆಳೆಯರು ಹಾಗೂ ಕುಟುಂಬಸ್ಥರೊಂದಿಗೆ ಹೊಸ ವರ್ಷ ಆಚರಣೆ ಮಾಡುತ್ತಿದ್ದರು. ಈ ವೇಳೆ ಪುನೀತ್ ಅಗರ್ವಾಲ್ ಹಾಗೂ ಅವರ ಕುಟುಂಬಸ್ಥರು ಲಿಫ್ಟ್‍ನಲ್ಲಿ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಪುನೀತ್ ಅಗರ್ವಾಲ್ ಸೇರಿದಂತೆ ಪುತ್ರಿ ಪಲಾಕ್, ಅಳಿಯ ಪಾಲ್ಕೇಶ್, ಮೂರು ವರ್ಷದ ಮೊಮ್ಮಗ, ಹಾಗೂ ಇಬ್ಬರು ಸಂಬಂಧಿಕರು ಮೃತಪಟ್ಟಿದ್ದು, ಘಟನೆಯಲ್ಲಿ ಪುನೀತ್ ಅವರ ಪತ್ನಿಗೆ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.