ಚೆನ್ನೈ : ಚೆನ್ನೈ ಮೂಲದ ಐಟಿ ಕಂಪನಿಯೊಂದು ತನ್ನ 100 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಕಂಪನಿಗಾಗಿ ಉದ್ಯೋಗಿಗಳು ನೀಡಿದ ಬೆಂಬಲ, ಪರಿಶ್ರಮ ಮತ್ತು ಅವರ ಕೊಡುಗೆಗಳನ್ನು ಪರಿಗಣಿಸಿ ಐಡಿಯಾಸ್2ಐಟಿ ಕಂಪನಿ ಮಾರುತಿ ಸುಜುಕಿ ಕಾರು ಗಿಫ್ಟ್ ನೀಡಿದೆ.
ಕಂಪನಿಯ ಲಾಭಾಂಶ ಹಂಚಿಕೆ ಅಂಗವಾಗಿ ಕಾರು ಉಡುಗೊರೆಯಾಗಿ ನೀಡಲಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ನಾವು ಅಂದುಕೊಂಡಿದ್ದಷ್ಟು ಗುರಿ ಸಾಧಿಸಿದಾಗ ಕಂಪನಿ ಲಾಭಾಂಶವನ್ನು ಉದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದಾಗಿ ಭರವಸೆ ನೀಡಿದ್ದೆವು. ಇದೀಗ ಕಾರುಗಳ ರೂಪದಲ್ಲಿ ಉಡುಗೊರೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಲಾಭಾಂಶವನ್ನು ಉದ್ಯೋಗಿಗಳ ಜೊತೆ ಹಂಚಿಕೊಳ್ಳುವ ಭರವಸೆ ನೀಡುತ್ತೇವೆ ಎಂದು ಕಂಪನಿಯ ಸಂಸ್ಥಾಪಕ ಮುಖ್ಯಸ್ಥ ಮುರಳಿ ವಿವೇಕಾನಂದನ್ ಅವರು ತಿಳಿಸಿದ್ದಾರೆ.
ಇತ್ತೀಚೆಗೆ, ಚೆನ್ನೈ ಮೂಲದ ಸಾಫ್ಟ್ವೇರ್ ಆಸ್-ಎ-ಸರ್ವೀಸ್ ಕಂಪನಿ(SaaS) ಕಿಸ್ಫ್ಲೋ ತನ್ನ ಕಂಪನಿಯ ಐವರು ಹಿರಿಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಲಕ್ಸುರಿ ಬಿಎಂಡಬ್ಲ್ಯೂ ಕಾರು ಉಡುಗೊರೆ ನೀಡಿತ್ತು.










