ಮುಂಬೈ : ಬಾಲಿವುಡ್ ನ ಸೂಪರ್ ಸ್ಟಾರ್ ಆಮಿರ್ ಖಾನ್ ಹಾಗೂ ಅವರ ಪತ್ನಿ ಕಿರಣ್ ರಾವ್ ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಈ ಕುರಿತು ಇಬ್ಬರೂ ಜಂಟಿ ಹೇಳಿಕೆ ನೀಡಿದ್ದು, 15 ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ 15 ವರ್ಷಗಳಲ್ಲಿ ಇಬ್ಬರೂ ಸುಂದರ ಜೀವನವನ್ನು ಕಳೆದಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಿಂದ ಕೂಡಿದೆ. ಆದರೆ, ನಾವೀಗ ನಮ್ಮ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಲು ಬಯಸುತ್ತೇವೆ. ನಾವಿಬ್ಬರೂ ಗಂಡ-ಹೆಂಡತಿಯಾಗಿ ಇರಲ್ಲ. ಆದರೆ ನಮ್ಮ ಮಗ ಆಜಾದ್ ಗೆ ನಾವಿಬ್ಬರು ಪೋಷಕರಾಗಿದ್ದು, ಒಟ್ಟಿಗೆ ಪೋಷಿಸುತ್ತೇವೆ. ನಮ್ಮ ನಿರ್ಧಾರಕ್ಕೆ ಬೆಂಬಲಿಸಿದ ಕುಟುಂಬಸ್ಥರು, ಸ್ನೇಹಿತರಿಗೂ ಧನ್ಯವಾದಗಳು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮೊದಲು ಆಮಿರ್ ಖಾನ್ ಅವರು ರೀನಾ ದತ್ತಾರನ್ನು ಮದುವೆಯಾಗಿದ್ದರು.










