21 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 15 ವರ್ಷದ ಬಾಲಕ..!

93
firstsuddi

ಮಲಪ್ಪುರಂ (ಕೇರಳ) : 21 ವರ್ಷದ ಯುವತಿ ಮೇಲೆ 15 ವರ್ಷದ ಬಾಲಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿಯ ಕೊಟ್ಟುಕರ ಎಂಬ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ.

ಕೊಟ್ಟುಕರ ನಿವಾಸಿಯಾಗಿರುವ ಯುವತಿಯನ್ನು ಅದೇ ಊರಿನ ಬಾಲಕ ಹಿಂಬಾಲಿಸಿ, ಏಕಾಏಕಿ ಆಕೆಯನ್ನು ರಸ್ತೆ ಬದಿಗೆ ಎಳೆದುಕೊಂಡು ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಈ ವೇಳೆ ಆತನಿಂದ ಹಲ್ಲೆಗೊಳಗಾದ ಯುವತಿ ಚೀರಾಡುತ್ತಾ, ಸಹಾಯ ಕೋರಿ ಸಮೀಪದ ಮನೆಯೊಂದಕ್ಕೆ ಓಡಿದ್ದಾಳೆ.

ಸ್ಥಳೀಯರು ಈಕೆಯನ್ನು ಕಂಡು ಆರೋಪಿಯನ್ನು ಹುಡುಕಲು ಬಂದಾಗ ಅಷ್ಟರಲ್ಲಿ ಆತ ಎಸ್ಕೇಪ್ ಆಗಿದ್ದಾನೆ. ಆದರೆ ಆತ ಅಲ್ಲಿಯೇ ಬಿಟ್ಟಿದ್ದ ಚಪ್ಪಲಿ ವಶಪಡಿಸಿಕೊಂಡಿದ್ದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಿದ್ದಾರೆ.