15-18 ವರ್ಷದ 2 ಕೋಟಿಗೂ ಅಧಿಕ ಮಕ್ಕಳು ಕೊರೊನಾ ಲಸಿಕೆ ಪಡೆದಿದ್ದಾರೆ : ಮನ್ಸುಖ್ ಮಾಂಡವಿಯಾ.

61
firstsuddi

ನವದೆಹಲಿ : ಜನವರಿ 3ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಲಸಿಕಾ ಅಭಿಯಾನ ಪ್ರಾರಂಭವಾಗಿದೆ. ಕೊವಿಡ್-19 ಹೊಸ ಹಂತದ ಅಭಿಯಾನ ಶುರುವಾದ ವಾರದಲ್ಲಿ 2 ಕೋಟಿಗೂ ಅಧಿಕ ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

ಜನವರಿ 16, 2021ರಂದು ಪ್ರಾರಂಭವಾದ ‘ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್’ ಅಡಿಯಲ್ಲಿ ಭಾರತವು ಈವರೆಗೆ ಒಟ್ಟು ಕೊರೊನಾ ಲಸಿಕೆ 150 ಕೋಟಿ ಡೋಸ್ ನೀಡಲಾಗಿದೆ.