ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ-17 ಮಂದಿ ಸೈನಿಕರು ಹುತಾತ್ಮ…

367
firstsuddi

ಛತ್ತೀಸ್‍ಘಡ : ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ 17 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಛತ್ತೀಸ್‍ಘಡದ ಸುಕ್ಮಾ ಜಿಲ್ಲೆಯ ಚಿಂತಗುಫಾ ಪ್ರದೇಶದ ಕೊರಾಜ್‍ಗುಡ ಬೆಟ್ಟಗಳ ಬಳಿ ಶನಿವಾರ ನಡೆದ ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ 17 ಮಂದಿ ಸೈನಿಕರು ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ಸೈನಿಕರಿಗಾಗಿ ಅರಣ್ಯ ಪ್ರದೇಶಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸಲಾಗಿತ್ತು. ಈ ವೇಳೆ ನಕ್ಸಲರ ವಿರುದ್ಧದ ಕಾರ್ಯಚರಣೆ ನಡೆದ ಒಂದು ದಿನದ ಬಳಿಕ 17 ಮಂದಿ ಸೈನಿಕರು ಮೃತದೇಹಗಳು ಪತ್ತೆಯಾಗಿದ್ದು, ಹುತಾತ್ಮ ಸೈನಿಕರ ಬಳಿಯಿದ್ದ 10 ಎಕೆ-47 ಸೇರಿದಂತೆ 15 ರೈಫಲ್‍ಗಳನ್ನು ನಕ್ಸಲರು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಈ ಕಾರ್ಯಾಚರಣೆಯಲ್ಲಿ ವಿಶೇಷ ಕಾರ್ಯಪಡೆ, ಕಮಾಂಡೋ ಬೆಟಾಲಿಯನ್ ಹಾಗೂ ಜಿಲ್ಲಾ ರಿಸರ್ವ್ ಗಾರ್ಡ್ ಸೇರಿದಂತೆ 150 ಭದ್ರತಾ ಸಿಬ್ಬಂಧಿಗಳು ಭಾಗಿಯಾಗಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ಡಿಎಂ ಅವಸ್ಥಿ ಅವರು ತಿಳಿಸಿದ್ದಾರೆ.