19 ಹೊಸ ಜಿಲ್ಲೆಗಳ ರಚನೆ : ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಘೋಷಣೆ…

27
firstsuddi

ಜೈಪುರ: 19 ಹೊಸ ಜಿಲ್ಲೆಗಳು ಮತ್ತು ಮೂರು ವಿಭಾಗೀಯ ಕೇಂದ್ರಗಳನ್ನು ರಚಿಸಿರುವುದಾಗಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಘೋಷಣೆ ಮಾಡಿದ್ದಾರೆ.

ನಿನ್ನೆ ರಾಜಸ್ಥಾನದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಈ ಹೊಸ 19 ಜಿಲ್ಲೆಗಳೊಂದಿಗೆ ರಾಜಸ್ಥಾನದ ಒಟ್ಟು ಜಿಲ್ಲೆಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಬನ್‌ಸ್ವಾರಾ, ಪಾಕಿ ಹಾಗೂ ಸಿಕಾರ ಮೂರು ಹೊಸ ವಿಭಾಗಗಳನ್ನು ಗುರುತಿಸಲಾಗಿದ್ದು, ರಾಜ್ಯದ ಒಟ್ಟು ವಿಭಾಗಗಳ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ರಾಜಸ್ಥಾನವು ಭೌಗೋಳಿಕ ವಿಸ್ತೀರ್ಣದಲ್ಲಿ ದೇಶದ ಅತಿದೊಡ್ಡ ರಾಜ್ಯವಾಗಿದೆ. ಕೆಲವು ಜಿಲ್ಲಾ ಕೇಂದ್ರಕ್ಕೆ 100 ಕಿ.ಮೀ.ಗಿಂತ ಹೆಚ್ಚು ದೂರವಿದೆ. ಜನರು ಸುಲಭವಾಗಿ ಜಿಲ್ಲಾ ಕೇಂದ್ರವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಮತ್ತು ಆಡಳಿತ ಕೂಡಾ ಪ್ರತಿಯೊಂದು ಕುಟುಂಬವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಗಳು ಚಿಕ್ಕದಾಗಿದ್ದರೆ, ಅದು ಪರಿಣಾಮಕಾರಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಆಡಳಿತವನ್ನು ಒದಗಿಸಬಹುದು ಎಂದಿದ್ದಾರೆ ಗೆಹ್ಲೋಟ್.

ಹೊಸ ಜಿಲ್ಲೆಗಳು ಯಾವುವು?
ಅನೂಪ್‌ಗಢ, ಬಲೋತ್ರಾ, ಬೇವಾರ್, ದೀಗ್, ದಿದ್ವಾನಾ-ಕುಚಮನ್ ನಗರ, ದುಡು, ಗಂಗಾಪುರ ನಗರ, ಜೈಪುರ ಉತ್ತರ, ಜೈಪುರ ದಕ್ಷಿಣ, ಜೋಧ್‌ಪುರ ಪೂರ್ವ, ಜೋಧ್‌ಪುರ ಪಶ್ಚಿಮ, ಕೇಕ್ರಿ, ಕೊಟ್‌ಪುಟ್ಲಿ, ಖೈರ್ತಾಲ್, ನೀಮ್ಕಥಾನ, ಫಲೋಡಿ, ಸಾಲುಂಬರ್, ಸಂಚೋರ್, ಶಹಪುರ (ಭಿಲ್ವಾರ) ಹೊಸ ಜಿಲ್ಲೆಗಳಾಗಿವೆ.