ನನ್ನ ಮೇಲೆ ಹೆಚ್ಚು ಕೇಸ್ ಹಾಕಿ ಅರೆಸ್ಟ್ ಮಾಡಬೇಕು ಎಂಬ ಉದ್ದೇಶವಿದೆ: ಡಿಕೆಶಿ, ಪ್ರಿಯಾಂಕ ಖರ್ಗೆ ವಿರುದ್ಧ ಯತ್ನಾಳ್ ಆರೋಪ…

58
firstsuddi

ಯಾದಗಿರಿ: ಡಿಕೆ ಶಿವಕುಮಾರ್, ಪ್ರಿಯಾಂಕ ಖರ್ಗೆ ಅವರು ನನ್ನ ಮೇಲೆ ಹೆಚ್ಚು ಕೇಸ್ ಹಾಕಿ ಅರೆಸ್ಟ್ ಮಾಡಬೇಕು ಎಂಬ ಉದ್ದೇಶವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

ಶಹಾಪುರನಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕರ ಪರವಾಗಿ ಬೃಹತ್ ರೋಡ್ ಶೋ ಬಳಿಕ ಮಾತನಾಡಿದ ಅವರು, ಯತ್ನಾಳ್ ದಿನಾಂಕ 7ರ ವರೆಗೆ ಬಹಿರಂಗ ಪ್ರಚಾರಕ್ಕೆ ಬರಬಾರದು. ಜೈಲಿನಲ್ಲಿ ಇರಬೇಕು ಎಂದು ವ್ಯವಸ್ಥಿತವಾದ ಸಂಚು ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ನೇರವಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪ್ರಿಯಾಂಕ ಖರ್ಗೆ ಅವರನ್ನು ನಾನೋಬ್ಬನೇ ಟಾರ್ಗೆಟ್ ಮಾಡುತ್ತಿದ್ದೇನೆ. ಕೆಲವೊಬ್ಬ ನಾಯಕರು ಹೊಂದಾಣಿಕೆ ಇರುವುದರಿಂದ ಯಾವುದೇ ರೀತಿ ನೇರವಾಗಿ ದಾಳಿ ಮಾಡುತ್ತಿಲ್ಲ. ನನ್ನ ಮೇಲೆ ಯಾರು ಯಾರು ವ್ಯವಸ್ಥಿತ ಕುಮ್ಮಕ್ಕು ಇದೆ ಎನ್ನುವುದನ್ನು ದಿನಾಂಕ 7ರ ನಂತರ ಹೇಳುತ್ತೇನೆ ಎಂದಿದ್ದಾರೆ.