20 ಭಯೋತ್ಪಾದಕ ಸ್ಲೀಪರ್ ಸೆಲ್‌ಗಳು ಸಿದ್ಧ – ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ ಮೇಲ್…

69
firstsuddi

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊಲೆ ಬೆದರಿಕೆಯ ಮೇಲ್ ಬಂದಿದೆ. ಮೇಲ್ ಬರೆದಿರುವ ವ್ಯಕ್ತಿಗೆ ಹಲವು ಭಯೋತ್ಪಾದಕರೊಂದಿಗೆ ಸಂಪರ್ಕವಿದೆ ಎಂದು ಮೇಲ್ ನಲ್ಲಿ ಹೇಳಲಾಗಿದೆ.

ಮೋದಿಯನ್ನು ಕೊಲ್ಲಲು 20 ಭಯೋತ್ಪಾದಕ ಸ್ಲೀಪರ್ ಸೆಲ್ ಗಳು ಸಿದ್ಧವಾಗಿವೆ ಮತ್ತು ಅವರನ್ನು ಕೊಲ್ಲಲು 20 ಕೆಜಿ ಆರ್ ಡಿಎಕ್ಸ್ ಸಿದ್ಧವಾಗಿವೆ. ನನ್ನ ಬಾಂಬ್ ಗಳಿಗೆ ಜನರು ಬಲಿಯಾಗುತ್ತಾರೆ. ನಾನು ಕೆಲವು ಉಗ್ರರನ್ನು ಸಂಪರ್ಕಿಸಿದ್ದೇನೆ. ಅವರು ಸಹ ನನಗೆ ಸಹಾಯ ಮಾಡಲಿದ್ದಾರೆ. ಎಲ್ಲಾ ಕಡೆ ಅದನ್ನು ಸ್ಫೋಟಿಸಲಿದ್ದೇನೆ ಎಂದು ಮೇಲ್‍ನಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಮುಂಬೈ ಶಾಖೆಗೆ ಈ ಇ-ಮೇಲ್ ರವಾನೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ತನಿಖೆ ಆರಂಭಿಸಿದೆ.