2023ರಿಂದ ವಿಶ್ವ ಸುಂದರಿ ಸ್ಪರ್ಧೆಗೆ ಭಾಗವಹಿಸಲು ವಿವಾಹಿತ ಮಹಿಳೆಯರಿಗೂ ಅವಕಾಶ…

47
firstsuddi

ಮುಂಬೈ : ಪ್ರತಿಷ್ಠಿತ ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆಯಲ್ಲಿ ವಿವಾಹಿತ ಮಹಿಳೆಯರಿಗೆ ಮತ್ತು ತಾಯಂದಿರಿಗೂ ಸ್ಪರ್ಧಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಇದು ಐತಿಹಾಸಿಕ ನಿರ್ಧಾರವಾಗಿದ್ದು, ವಿಶ್ವ ಸುಂದರಿ ಸ್ಪರ್ಧಿಗಳ ವ್ಯಾಪ್ತಿ ಇನ್ನಷ್ಟು ಹೆಚ್ಚಲಿದೆ. 2023 ರಿಂದ ಪ್ರಾರಂಭವಾಗುವ ಸ್ಪರ್ಧೆಯ ಸ್ಪರ್ಧಿಗಳಿಗೆ ಅರ್ಹತೆಗೆ ಮಾನದಂಡವಾಗಿರುವುದಿಲ್ಲ.

ಈ ಹಿಂದಿನ ವಿಶ್ವ ಸುಂದರಿ ಸ್ಪರ್ಧೆಯ ನಿಯಮಗಳ ಪ್ರಕಾರ, ಭಾಗವಹಿಸುವ ಸ್ಪರ್ಧಾಳುಗಳು ಅವಿವಾಹಿತರಾಗಿಯೇ ಇರಬೇಕಿತ್ತು. ಮಕ್ಕಳಾದ ತಾಯಂದಿರುಗಳಿಗೆ ಸ್ಪರ್ಧಿಸಲು ಅವಕಾಶ ಸಹ ಇರಲಿಲ್ಲ. ಜೊತೆಗೆ ವಿಜೇತರು ಮಿಸ್ ಯೂನಿವರ್ಸ್ ಆಗಿ ಆಳ್ವಿಕೆ ಮಾಡುವಾಗ ಗರ್ಭಿಣಿಯಾಗಿರಬಾರದು ಎಂಬ ನಿಯಮವನ್ನೂ ಸಹ ಹೇರಲಾಗಿತ್ತು. ಆದರೆ, ಇದೀಗ ಈ ನಿಯಮ ಬದಲಾಗಿದೆ.

ಮಿಸ್ ಯೂನಿವರ್ಸ್ 2020 ವಿಜೇತ ಮೆಕ್ಸಿಕೋದ ಆಂಡ್ರಿಯಾ ಮೆಜಾ ನಿಯಮ ಬದಲಾವಣೆಯನ್ನು ಶ್ಲಾಘಿಸಿದ್ದಾರೆ. ಪುರುಷರು ಸಾಧಿಸಿದ್ದನ್ನು ಮಹಿಳೆಯರು ಈಗ ಸಾಧಿಸುತ್ತಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಯುವತಿಯರು ಮಾತ್ರವಲ್ಲದೇ ತಾಯಂದಿರೂ ಸೇರುವ ಸಮಯ ಬಂದಿದೆ ಎಂದು ಅವರು ಖುಷಿ ಹಂಚಿಕೊಂಡಿದ್ದಾರೆ.