2024ರ ಸಂಕ್ರಾಂತಿ ವೇಳೆಗೆ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ…

53
firstsuddi

ನವದೆಹಲಿ : ಮುಂದಿನ ಸಂಕ್ರಮಣದ ವೇಳೆಗೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಕಾಮಗಾರಿ ಅಂತ್ಯವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಂದಿರ ನಿರ್ಮಾಣ ಪ್ರಗತಿ ಬಗ್ಗೆ ತಿಳಿಸಿದ ಅವರು, ದೇವಸ್ಥಾನದ ಕಾಮಗಾರಿ 60%ರಷ್ಟು ಅಂತ್ಯವಾಗಿದೆ. ಅಕ್ಟೋಬರ್ ವೇಳೆಗೆ ಮೊದಲ ಮಹಡಿ ಸಿದ್ಧವಾಗಲಿದ್ದು, ಮುಂದಿನ ಜನವರಿಗೆ ಕಾಮಗಾರಿ ಅಂತ್ಯವಾಗಲಿದೆ ಎಂದರು.

2024ರ ಮಕರ ಸಂಕ್ರಾಂತಿಯ ವೇಳೆಗೆ ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ರಾಮಲಾಲಾ ಅವರ ಪ್ರಾಣ ಪ್ರತಿಸ್ಥಾಪಿಸಲಾಗುವುದು, ಸದ್ಯದ ಸಿದ್ಧತೆಗಳ ಪ್ರಕಾರ ಜನವರಿ 1 ರಿಂದ 14ರೊಳಗೆ ಪ್ರಾಣ ಪ್ರತಿಷ್ಠಾನ ಕಾರ್ಯ ನಡೆಯುವ ಯೋಜನೆ ಇದೆ ಎಂದು ಹೇಳಿದರು.

ಶ್ರೀರಾಮನ ವಿಗ್ರಹವು ಟ್ರಸ್ಟ್ ಪ್ರಕಾರ 8.5 ಅಡಿ ಎತ್ತರವಿರುತ್ತದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಿರುವ ರಾಮನ ಮೂರ್ತಿಯೂ 5 ರಿಂದ 7 ವರ್ಷ ವಯಸ್ಸಿನ ಮಗುವಿನ ರೂಪದಲ್ಲಿರಲಿದೆ. ಓರಿಸ್ಸಾದ ಹಿರಿಯ ಶಿಲ್ಪಿಗಳಾದ ಸುದರ್ಶನ್ ಸಾಹು ಮತ್ತು ವಾಸುದೇವ್ ಕಾಮತ್ ಮತ್ತು ಕರ್ನಾಟಕ ಮೂಲದ ರಾಮಯ್ಯ ವಾಡೇಕರ್ ಕೆತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.