ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸುಮಾರು 28 ವರ್ಷಗಳ ನಂತರ ಹುಟ್ಟೂರಿನಲ್ಲಿ ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ತಮ್ಮ ಹುಟ್ಟೂರಾದ ಉತ್ತರಾಖಂಡದ ಪೌರಿಗೆ ತೆರಳಿರುವ ಯೋಗಿ, ತಮ್ಮ ತಾಯಿಯನ್ನು ಭೇಟಿಯಾಗಿದ್ದಾರೆ. ಇಂದು ನಿಗದಿಯಾಗಿರುವ ತನ್ನ ಸೋದರಳಿಯನ ಕೇಶಮುಂಡನ ಸಮಾರಂಭಕ್ಕಾಗಿ ಅವರು ತಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ತಾಯಿ ಸಾವಿತ್ರಾ ದೇವಿ ಅವರನ್ನು ಭೇಟಿಯಾಗಿ ಅವರ ಕಾಲುಗಳನ್ನು ಮುಟ್ಟಿ ನಮಸ್ಕರಿಸುತ್ತಿರುವ ಫೋಟೋವನ್ನು ಯೋಗಿ ಆದಿತ್ಯನಾಥ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉತ್ತರಾಖಂಡ್ ಗೆ ಕುಟುಂಬ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದಾರೆ ಎಂದು ವರದಿಯಾಗಿದೆ.