ಜಮ್ಮು ಕಾಶ್ಮೀರಾದಲ್ಲಿ ಎನ್‍ಕೌಂಟರ್-ಮೂವರು ಉಗ್ರರನ್ನು ಹೊಡೆದುರುಳಿದ ಭಾರತೀಯ ಸೇನೆ…

159
firstsuddi

ಶ್ರೀನಗರ : ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ. ಜಮ್ಮು ಕಾಶ್ಮೀರಾದ ಕುಲ್ಲಂ ಜಿಲ್ಲೆಯ ಹರ್ಡ್ ಮಂಗುರಿ ಬ್ಯಾಟ್‍ಪೋರಾ ಪ್ರದೇಶದಲ್ಲಿ ಉಗ್ರರ ಗುಂಪು ಅಡಗಿರುವ ಮಾಹಿತಿಯನ್ನು ತಿಳಿದು ರಾಷ್ಟ್ರೀಯ ರೈಫಲ್ಸ್, ಸ್ಥಳೀಯ ಪೊಲೀಸರ ಎಸ್‍ಒಜಿ ಸೇರಿದಂತೆ ಭದ್ರತಾ ಪಡೆಗಳು ನಿನ್ನೆ ಸಂಜೆಯಿಂದ ಕಾರ್ಯಾಚರಣೆ ಆರಂಭಿಸಿದ್ದು, ಈ ವೇಳೆ ಬ್ಯಾಟ್‍ಪೋರಾ ಪ್ರದೇಶದ ಹಣ್ಣಿನ ಪ್ರದೇಶದಲ್ಲಿ ಅಡಗಿದ್ದ ಉಗ್ರರು ಏಕಾಏಕಿ ಭದ್ರತಾ ಪಡೆಗಳತ್ತ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿದ್ದು, ಇನ್ನೂ ಅಡಗಿರುವ 2-3 ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.