ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಲೇ ಇದ್ದು, ಭಾರತೀಯ ಸೇನೆಯ ಸಿ.ಆರ್.ಪಿ.ಎಫ್ ನ 46 ಮಂದಿ ಯೋಧರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಅಲ್ಲದೇ ಮಹಾಮಾರಿ ಕೊರೊನಾ ವೈರಸ್‍ಗೆ 55 ವರ್ಷದ ಯೋಧರೊಬ್ಬರು ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಯೋಧರಿಗೆ ಏಪ್ರಿಲ್ 17ರಂದು ಸೋಂಕಿನ ಲಕ್ಷಣ ಕಂಡುಬಂದಿದ್ದು, ಬಳಿಕ ಏಪ್ರಿಲ್ 21ರಂದು ವೈರಸ್ ತಗುಲಿರುವುದಾಗಿ ದೃಢವಾಗಿತ್ತು. ವೈರಸ್ ದೃಢವಾದ ಬಳಿಕ ಅವರನ್ನು ಸಫ್ದರ್ಜುಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇತ್ತ 46 ಮಂದಿ ಯೋಧರಿಗೆ ಸೋಂಕು ಪತ್ತೆಯಾಗಿರುವುದರಿಂದ ಸಿ.ಆರ್.ಪಿ.ಎಫ್‍ನ 1000ಕ್ಕೂ ಹೆಚ್ಚು ಮಂದಿ ಯೋಧರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದು, ಸೋಂಕಿತ ಯೋಧರಿಗೆ ಮಂಡ್ವಾಲಿಯಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.










