ಕಾರವಾರ : 5 ಕೋಟಿ ಮೌಲ್ಯದ ತಿಮಿಂಗಿಲ ವಾಂತಿಯನ್ನು ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರನ್ನು ಶಿರಸಿ ನಗರ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಮೂಲದ ಸಂತೋಷ್ ಕಾಮತ್, ಶಿರಸಿಯ ರಾಜೇಶ್ ಪೂಜಾರಿ ಬಂಧಿತ ಆರೋಪಿಗಳು. ಬೆಳಗಾವಿಯಿಂದ ತಿಮಿಂಗಲ ವಾಂತಿಯನ್ನು ತಂದು ಶಿರಸಿಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಐದು ಕೋಟಿ ಮೌಲ್ಯದ ಐದು ಕೆಜಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಅನ್ನು ವಶಕ್ಕೆ ಪಡೆಯಲಾಗಿದೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಅಂಬರ್ ಗ್ರೀಸ್?
ತಿಮಿಂಗಿಲ ತಿಂದ ಆಹಾರವು ಜೀರ್ಣಿಸಿಕೊಳ್ಳಲಾಗದೇ ಅದನ್ನು ಹೊರ ಕಕ್ಕುತ್ತವೆ. ಈ ಹೊರ ಕಕ್ಕಿದ ಆಹಾರವು ದ್ರವರೂಪದಲ್ಲಿ ಗಟ್ಟಿಯಾಗಿರುತ್ತದೆ. ಮೊದಲು ಈ ದ್ರವರೂಪದ ಗಟ್ಟಿಯಾದ ವಸ್ತುವು ಸಮುದ್ರ ಆಳದಲ್ಲಿ ಇದ್ದು ನಂತರ ಕೆಲವು ರಾಸಾಯನಿಕ ಕ್ರಿಯೆಯ ಮೂಲಕ ಸಮುದ್ರದಲ್ಲಿ ತೇಲುತ್ತವೆ. ತಿಮಿಂಗಿಲದ ವಾಂತಿಯು ಕೆಟ್ಟ ವಾಸನೆ ಇದ್ದರೂ ಸಹ ಇದು ಕೋಟಿಗಟ್ಟಲೇ ಬೆಲೆಬಾಳುತ್ತದೆ. ಇವುಗಳನ್ನು ಹೊರದೇಶಗಳಲ್ಲಿ ಸುಗಂದ ದ್ರವ್ಯ ತಯಾರಿಸಲು ಬಳಸಲಾಗುತ್ತದೆ. ಭಾರತದಲ್ಲಿ ನಿರ್ಬಂಧ ಇರುವುದರಿಂದ ಮುಂಬೈ ಮೂಲಕ ಇತರೆ ದೇಶಗಳಿಗೆ ಕಳ್ಳಹಾದಿಯಲ್ಲಿ ಸಾಗಿಸಿ ಹಣ ಸಂಪಾದಿಸುತ್ತಾರೆ. ಇತ್ತೀಚೆಗೆ ಮುರುಡೇಶ್ವರದಲ್ಲಿ ಒಂದು ಕೆಜಿಗೂ ಹೆಚ್ಚು ಮೌಲ್ಯದ ಅಂಬರ್ ಗ್ರೀಸ್ ದೊರಕಿತ್ತು. ಇದೀಗ ಐದು ಕೆಜಿಯಷ್ಟು ತೂಕದ ತಿಮಿಂಗಿಲದ ವಾಂತಿ ಪತ್ತೆಯಾಗಿದ್ದು, ಮೊದಲ ಪ್ರಕರಣ ಇದಾಗಿದೆ.










