ಮಾಸ್ಕೋ : ರಷ್ಯಾದಲ್ಲಿ ಮತ್ತೆ ಕೋವಿಡ್ ಸ್ಫೋಟಗೊಂಡಿದ್ದು, ಮತ್ತೆ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ನಂತರವೂ ಕೊರೊನಾ ಸೋಂಕು ಹೆಚ್ಚು ಹರಡಿದ್ದಲ್ಲಿ ಲಾಕ್‍ಡೌನ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 37,390 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಕೋವಿಡ್‍ನಿಂದ ಒಂದೇ ದಿನ 1069 ಮಂದಿ ಮೃತಪಟ್ಟಿರುವುದಾಗಿ ದಾಖಲೆಯಾಗಿದೆ.
ಪ್ರಕರಣಗಳು ಹೆಚ್ಚಿರುವ ನಗರವಾದ ಸಂತ ಪೀಟರ್ಸ್‍ಬರ್ಗ್ ನಗರದಲ್ಲಿ ರೆಸ್ಟೋರೆಂಟ್, ಕೆಫೆಗಳು, ವಾಣಿಜ್ಯೇತರ ಮಳಿಗೆಗಳನ್ನು ಅ.30ರಿಂದ ನ.7ರವರೆಗೆ ಬಂದ್ ಮಾಡಿ ಆದೇಶ ಹೊರಡಿಸಿದೆ. ಬ್ಯೂಟಿ ಸಲೂನ್, ಜಿಮ್, ಸ್ಪೋರ್ಟ್ ಸೆಂಟರ್, ಹಾಗೂ ಅಂಗಡಿಗಳನ್ನು ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ಬಂದ್ ಮಾಡಲಾಗಿದೆ. ಔಷಧ ಮಳಿಗೆಗಳು, ಗ್ಯಾಸ್ ಸ್ಟೇಷನ್, ದಿನಸಿ ಅಂಗಡಿಗಳನ್ನು ಮುಚ್ಚುವಂತೆ ತಿಳಿಸಲಾಗಿದೆ.
ಇನ್ನು ವಾರಾಂತ್ಯ ರಜೆ ದಿನಗಳಲ್ಲಿ ಸ್ವಿಮ್ಮಿಂಗ್ ಪೂಲ್, ಉದ್ಯಾನಗಳು, ಮನರಂಜನಾ ಕಾರ್ಯಕ್ರಮಗಳಿಗೂ ನಿರ್ಬಂಧ ಹೇರಲಾಗಿದೆ.










