5 ವರ್ಷದ ಬಾಲಕಿಯ ಕೈ ಕಾಲು ಕಟ್ಟಿ ಸುಡು ಬಿಸಿಲಿನಲ್ಲಿ ಮಲಗಿಸಿದ ಪೋಷಕರು!

59
firstsuddi

ನವದೆಹಲಿ: ಹೋಂವರ್ಕ್ ಮಾಡದಿದ್ದಕ್ಕಾಗಿ ಪೋಷಕರು 5 ವರ್ಷದ ಬಾಲಕಿಯ ಕೈ ಕಾಲು ಕಟ್ಟಿ ಮನೆಯ ಛಾವಣಿಯ ಮೇಲೆ ಸುಡು ಬಿಸಿಲಿನಲ್ಲಿ ಮಲಗಿಸಿ ವಿಕೃತಿ ಮೆರೆದಿದ್ದಾರೆ.

ಮಾಹಿತಿಯ ಪ್ರಕಾರ, ಅಪ್ರಾಪ್ತ ವಯಸ್ಕ ಬಾಲಕಿ 1 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ದೆಹಲಿಯ ಕರವಾಲ್ ನಗರದ ತುಖ್ಮೀರ್‌ಪುರದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾಳೆ. ಬಾಲಕಿಗೆ ಕಿರುಕುಳ ನೀಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ, ಪೊಲೀಸರು ಬಾಲಕಿಯ ಕುಟುಂಬಸ್ಥರನ್ನು ಪತ್ತೆ ಹಚ್ಚಿದ್ದಾರೆ. ನಂತರ ಈ ಕುರಿತಂತೆ ತನಿಖೆ ನಡೆಸಿದಾಗ ಆಕೆಯ ತಾಯಿಯೇ ಶಿಕ್ಷೆ ನೀಡಿದ್ದಾರೆ ಎಂದು ತಿಳಿದುಬಂದಿದೆ.