60 ವಯಸ್ಸಿನ ವ್ಯಕ್ತಿಗೆ ಹನಿಟ್ರ್ಯಾಪ್ ಮಾಡಿ ಬೆದರಿಕೆ, ಯುವತಿ ಸೇರಿದಂತೆ ನಾಲ್ವರ ಮೇಲೆ ಪ್ರಕರಣ ದಾಖಲು…

862
firstsuddi

ಮಂಗಳೂರು : ಯುವತಿ ಹಾಗೂ ವ್ಯಕ್ತಿಯೊಬ್ಬರ ಅಶ್ಲೀಲ ವೀಡಿಯೋ ವೈರಲ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ತನಿಖೆ ನಡೆಸುವ ವೇಳೆ ಇದು ಹನಿಟ್ರ್ಯಾಪ್ ಎಂದು ತಿಳಿದು ಬಂದಿದ್ದು, ಅಬ್ದುಲ್ ರಹಿಮಾನ್ ಹನಿಟ್ರ್ಯಾಪ್‍ಗೆ ಒಳಗಾಗಿದ್ದ ವ್ಯಕ್ತಿ ಎನ್ನಲಾಗಿದೆ. ಅಬ್ದುಲ್ ರಹಿಮಾನ್(60) ಅವರಿಗೆ 9ಮಕ್ಕಳಿದ್ದು, 8ತಿಂಗಳ ಹಿಂದೆ ಯುವತಿ ಫೇಸ್ ಬುಕ್ ಮುಖಾಂತರ ಪರಿಚಯವಾಗಿತ್ತು. ಪರಿಚಯವಾದ ಕೆಲವು ದಿನಗಳ ಬಳಿಕ ವ್ಯಕ್ತಿಯನ್ನು ಮಂಗಳೂರಿನ ರೆಸಾರ್ಟ್‍ವೊಂದರಲ್ಲಿ ಭೇಟಿಯಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ಆ ಸಮಯದಲ್ಲಿ ಯುವತಿಯೇ ತನ್ನ ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದು, ಈಗಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಬಂಡ್ವಾಳ ಪೊಲೀಸರು ಅಬ್ದುಲ್ ರಹಿಮಾನ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಇದು ಹನಿಟ್ರ್ಯಾಪ್ ಪ್ರಕರಣ ಎಂದು ತಿಳಿದು ಬಂದಿದ್ದು, ಯುವತಿ ನಾಲ್ವರು ಅಪರಿಚಿತರೊಂದಿಗೆ ಸೇರಿ ತನ್ನ ಬಳಿ ಇದ್ದ ವೀಡಿಯೋವನ್ನು ಮುಂದಿಟ್ಟು ವ್ಯಕ್ತಿಗೆ ಹಣದ ಆಮಿಷವನ್ನು ಒಡ್ಡಿದ್ದಾರೆ. ಹಣ ನೀಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯನ್ನು ಅಪಹರಿಸಿ 1.8 ಲಕ್ಷ ರೂ ಹಣವನ್ನು ಪಡೆದಿರುವುದಲ್ಲದೇ ವ್ಯಕ್ತಿಯ ಎಟಿಎಂ ನ್ನು ಉಪಯೋಗಿಸಿಕೊಂಡು 9 ಸಾವಿರ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ತನಿಖೆ ವೇಳೆ ರಹಿಮಾನ್ ಅವರು ಹೇಳಿದ್ದಾರೆ. ಈ ಕುರಿತು ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.