ನವದೆಹಲಿ : ಇಂದು 68ನೇ ರಾಷ್ಟ್ರೀಯ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ ಕನ್ನಡ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಕನ್ನಡದ ‘ಡೊಳ್ಳು’ ಸಿನಿಮಾಗೆ ‘ಕನ್ನಡದ ಅತ್ಯುತ್ತಮ ಚಿತ್ರ’ ಎಂಬ ಪ್ರಶಸ್ತಿ ದೊರಕಿದೆ. ಸುನಿಲ್ ಪುರಾಣಿಕ್ ನಿರ್ದೇಶನದ ಈ ಚಿತ್ರ ಒಟ್ಟು 3 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಕನ್ನಡದ ಅತ್ಯುತ್ತಮ ಸಿನಿಮಾ ಹಾಗೂ ಉತ್ತಮ ಆಡಿಯೋ ಪ್ರಶಸ್ತಿಗೆ ಭಾಜನವಾಗಿದೆ.
ಇದಲ್ಲದೇ ನಟ ಸಂಚಾರಿ ವಿಜಯ್ ಅಭಿನಯದ ‘ತಲೆದಂಡ‘ ಚಿತ್ರಕ್ಕೂ ಪ್ರಶಸ್ತಿ ದೊರಕಿದ್ದು, ಈ ಚಿತ್ರಕ್ಕೆ ಉತ್ತಮ ಪರಿಸರ ಕಾಳಜಿ ಸಿನಿಮಾ ಎಂಬ ಪ್ರಶಸ್ತಿಯನ್ನು ನೀಡಿದೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ನಾದದ ನವನೀತ ಕಿರುಚಿತ್ರಕ್ಕೂ ರಾಷ್ಟ್ರ ಪ್ರಶಸ್ತಿ ದೊರಕಿದೆ.
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿವರ ಇಂತಿದೆ :
ಅತ್ಯುತ್ತಮ ಕನ್ನಡ ಸಿನಿಮಾ: ಡೊಳ್ಳು
ಅತ್ಯುತ್ತಮ ಆಡಿಯೋಗ್ರಫಿ: ಡೊಳ್ಳು ಕನ್ನಡ ಸಿನಿಮಾ
ಅತ್ಯುತ್ತಮ ಜನಪ್ರಿಯ ಚಿತ್ರ: ತಾನಾಜಿ
ಅತ್ಯುತ್ತಮ ಕಥಾಚಿತ್ರ: ಸೂರರೈ ಪೋಟ್ರು
ಅತ್ಯುತ್ತಮ ಮಲಯಾಳಂ ಚಿತ್ರ: ತುಮ್ಕಲಾಶ್ಚ ನಿಶ್ಚಯಮ್
ಅತ್ಯುತ್ತಮ ಹಿಂದಿ ಚಿತ್ರ: ತುಳಸಿದಾಸ್ ಜೂನಿಯರ್
ಅತ್ಯುತ್ತಮ ತಮಿಳು ಚಿತ್ರ: ಶಿವರಂಜಿನಿಯುಂ ಇನ್ನುಂ ಸಿಲ ಪೆಂಗಲುಂ
ಅತ್ಯುತ್ತಮ ತುಳು ಚಿತ್ರ: ಜೀಟಿಗೆ
ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರ: ತಲೆದಂಡ (ಕನ್ನಡ)
ಅತ್ಯುತ್ತಮ ಸಿನಿಮಾಸ್ನೇಹಿ ರಾಜ್ಯ: ಮಧ್ಯ ಪ್ರದೇಶ
ಅತ್ಯುತ್ತಮ ಮಕ್ಕಳ ಸಿನಿಮಾ: ಸುಮಿ (ಮರಾಠಿ)
ಅತ್ಯುತ್ತಮ ನಿರ್ದೇಶಕ: ಸಚ್ಚಿದಾನಂದನ್ ಕೆ.ಆರ್
ಅತ್ಯುತ್ತಮ ಅಸ್ಸಾಮೀಸ್ ಸಿನಿಮಾ: ಬ್ರಿಡ್ಜ್
ಅತ್ಯುತ್ತಮ ನಟ: ಅಜಯ್ ದೇವಗನ್ ಮತ್ತು ಸೂರ್ಯ
ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ
ಅತ್ಯುತ್ತಮ ಹಿನ್ನೆಲೆ ಗಾಯಕಿ: ನಂಚಮ್ಮ (ಅಯ್ಯಪ್ಪನುಂ ಕೋಶಿಯುಂ)
ಅತ್ಯುತ್ತಮ ಹಿನ್ನೆಲೆ ಗಾಯಕ: ರಾಹುಲ್ ದೇಶಪಾಂಡೆ (ಮಿ ವಸಂತ್ ರಾವ್)
ಅತ್ಯುತ್ತಮ ಸಂಗೀತ ನಿರ್ದೇಶನ: ಥಮನ್ (ಸಿನಿಮಾ – ಅಲಾ ವೈಕುಂಠಪುರಮುಲೋ: ತೆಲುಗು)
ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್: ನಚಿಕೇತ್ ಬಾರ್ವೆ, ಮಹೇಶ್ ಶೆರ್ಲಾ – ಚಿತ್ರ: ತಾನ್ಹಾಜಿ (ಹಿಂದಿ)
ಅತ್ಯುತ್ತಮ ಚಿತ್ರಕಥೆ: ಸುಧಾ ಕೊಂಗರು, ಶಾಲಿನಿ ಉಷಾ ನಾಯರ್ (ಸೂರರೈ ಪೋಟ್ರು)
ಅತ್ಯುತ್ತಮ ಪೋಷಕ ನಟ: ಬಿಜು ಮೆನನ್
ಅತ್ಯುತ್ತಮ ಸಾಹಸ ನಿರ್ದೇಶಕ: ರಾಜಶೇಖರ್, ಮಾಫಿಯಾ ಶಶಿ ಮತ್ತು ಸುಪ್ರೀಂ ಸುಂದರ್ – ಚಿತ್ರ: ಅಯ್ಯಪ್ಪಂ ಕುಶಿಯಾನ್ (ಮಲಯಾಳಂ)
ಅತ್ಯುತ್ತಮ ನೃತ್ಯ ನಿರ್ದೇಶನ: ಸಂಧ್ಯಾ ರಾಜು – ಚಿತ್ರ: ನಾಟ್ಯಂ (ತೆಲುಗು)
ಅತ್ಯುತ್ತಮ ಸಂಗೀತ ನಿರ್ದೇಶನ: ಜಿ.ವಿ.ಪ್ರಕಾಶ್ ಕುಮಾರ್ – ಚಿತ್ರ: ಸೂರರೈ ಪೋಟ್ರು (ತಮಿಳು)
ಅತ್ಯುತ್ತಮ ಸಂಕಲನ: ಶ್ರೀಕಾರ್ ಪ್ರಸಾದ್










