6ನೇ ತರಗತಿ ಪರೀಕ್ಷೆಯಲ್ಲಿ ಕರೀನಾ ಕಪೂರ್ ಪುತ್ರನ ಬಗ್ಗೆ ಪ್ರಶ್ನೆ – ವೈರಲ್ ಆಯ್ತು ಫೋಟೋ …

85
firstsuddi

ಮುಂಬೈ : ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್  ಪುತ್ರ ತೈಮೂರ್ ಅಲಿ ಖಾನ್ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಇದೀಗ 6ನೇ ತರಗತಿ ಪರೀಕ್ಷೆಯಲ್ಲಿ ತೈಮೂರು ಕುರಿತಾಗಿ ಪ್ರಶ್ನೆ ಕೇಳಲಾಗಿದ್ದು, ಆ ಪ್ರಶ್ನೆ ಪತ್ರಿಕೆ ಈಗ ವೈರಲ್ ಆಗಿದೆ.

ಮಧ್ಯ ಪ್ರದೇಶದ ಖಾಸಗಿ ಶಾಲೆಯಲ್ಲಿನ 6ನೇ ತರಗತಿ ಮಕ್ಕಳಿಗೆ ಪ್ರಚಲಿತ ಘಟನೆಗಳು ವಿಷಯದ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಪುತ್ರನ ಪೂರ್ತಿ ಹೆಸರು ಏನು? ಎಂಬ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆ ಪ್ರತಿಕೆಯ ಫೋಟೋ ಈಗ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.

ಮಕ್ಕಳಿಗೆ ಈ ರೀತಿ ಪ್ರಶ್ನೆ ಕೇಳಿರುವ ಶಾಲೆಯ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತಂತೆ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದೆ. ಪರೀಕ್ಷೆಯಲ್ಲಿ ಈ ರೀತಿ ಪ್ರಶ್ನೆ ಕೇಳಿದ್ದು ಆಕಸ್ಮಿಕವೋ ಅಥವಾ ಉದ್ದೇಶಪೂರಿತವೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.