ಹಾಲಿವುಡ್ ನಟ ರಾಬರ್ಟ್ ಡಿನೆರೋ ತಮ್ಮ 79ನೇ ವಯಸ್ಸಿನಲ್ಲಿ ಏಳನೇ ಮಗುವಿಗೆ ತಂದೆಯಾಗಿದ್ದಾರೆ. ಈ ಸುದ್ದಿಯನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
ರಾಬರ್ಟ್ ಡಿನೆರೋ ಅವರು 60ರ ದಶಕದಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಅವರು ‘ಕಿಲ್ಲಿಂಗ್ ಆಫ್ ದಿ ಫ್ಲವರ್ ಮೂನ್’, ‘ಅಬೌಟ್ ಮೈ ಫಾದರ್’ ಮೊದಲಾದ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಸಿನಿಮಾವೊಂದರ ಪ್ರಚಾರದ ವೇಳೆ ಅವರು ಏಳನೇ ಮಗುವಿನ ವಿಚಾರ ರಿವೀಲ್ ಮಾಡಿದ್ದಾರೆ.
‘ನಿಮಗೆ ಆರು ಮಕ್ಕಳಲ್ಲವೇ’ ಎಂದು ಸಂದರ್ಶಕರೊಬ್ಬರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಾಬರ್ಟ್ ಡಿನೆರೋ ಅವರು ನನಗೆ ಏಳು ಮಕ್ಕಳು ಎಂದು ಹೇಳುವ ಮೂಲಕ ನಿರೂಪಕರನ್ನೇ ಬೆಚ್ಚಿಬೀಳಿಸಿದ್ದಾರೆ.
ರಾಬರ್ಟ್ ಡಿನೆರೋಗೆ ಇಬ್ಬರು ಪತ್ನಿಯರು ಹಾಗೂ ಮಾಡೆಲ್ ವೊಬ್ಬರ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ. ಇಬ್ಬರು ಪತ್ನಿಯರಿಗೆ ತಲಾ ಎರಡು ಮಕ್ಕಳು. ಮಾಡೆಲ್ ಜೊತೆ ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ. ಈಗ ಅವರು ಏಳನೇ ಮಗು ಪಡೆದಿದ್ದು ಯಾರಿಂದ ಎಂಬುದನ್ನು ರಿವೀಲ್ ಮಾಡಿಲ್ಲ.










