ಸೀರಿಯಲ್ ನಟಿ ರೆಂಜೂಷಾ ಮೆನನ್ ಅವರ ನಿಧನದ ಆಘಾತದ ನಡುವೆ, ಮತ್ತೊಂದು ಸಾವಿನ ಸುದ್ದಿ ಎದುರಾಗಿದೆ. ಕರುತ್ತಮುತ್ತು ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ(ಅಕ್ಟೋಬರ್ 31) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ನಟ ಕಿಶೋರ್ ಸತ್ಯ ಅವರು ಅಭಿಮಾನಿಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದಾರೆ.
ವೈದ್ಯ ಪ್ರಿಯಾ ಅವರು ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಕಿರುತೆರೆಯಲ್ಲಿ ಬೇಡಿಕೆಯ ನಟಿಯಾಗಿದ್ರು. ಮದುವೆಯ ಬಳಿಕ ನಟನೆಗೆ ಪ್ರಿಯಾ ಬ್ರೇಕ್ ನೀಡಿದ್ದರು. 35ನೇ ವಯಸ್ಸಿನ ಪ್ರಿಯಾ, 8 ತಿಂಗಳ ತುಂಬು ಗರ್ಭಿಣಿಯಾಗಿದ್ದರು. ಎಂದಿನಂತೆ ಹೆಲ್ತ್ ಚೆಕಪ್‌ಗೆ ಖಾಸಗಿ ಆಸ್ಪತ್ರೆಗೆ ಹೋದಾಗ ನಟಿಗೆ ಹೃದಯಾಘಾತವಾಗಿದೆ. ನವಜಾತ ಶಿಶುಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಬ್ಬಳೇ ಮಗಳಾಗಿರುವ ಪ್ರಿಯಾಳ ಸಾವು ಕಂಡು ತಾಯಿ ಆಘಾತಕ್ಕೆ ಒಳಗಾಗಿದ್ದಾರೆ. ಇದೀಗ ಪ್ರಿಯಾ ನಿಧನಕ್ಕೆ ಅನೇಕ ಕಿರುತೆರೆ ನಟ-ನಟಿಯರು ಕಂಬಿನಿ ಮಿಡಿದಿದ್ದಾರೆ.










