8 ತಿಂಗಳ ಮಗು ಮೇಲೆ ಹಲ್ಲೆ ನಡೆಸಿದ ದಾದಿ – ಐಸಿಯುಗೆ ದಾಖಲು…

58
firstsuddi

ಅಹಮದಾಬಾದ್ : ಎಂಟು ತಿಂಗಳ ಮಗುವಿನ ಮೇಲೆ ದಾದಿ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದ್ದು, ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸೂರತ್ ನ ರಾಂದರ್​​ಪಾಲನ್​ಪುರ್​ದಲ್ಲಿ ವಾಸವಾಗಿರುವ ಮಗುವಿನ ಪೋಷಕರಿಬ್ಬರು ಉದ್ಯೋಗಿಗಳಾಗಿದ್ದಾರೆ. ಹೀಗಾಗಿ ಎಂಟು ತಿಂಗಳ ಶಿಶು ನೋಡಿಕೊಳ್ಳಲು ದಾದಿ ನೇಮಕ ಮಾಡಿದ್ದಾರೆ. ನೆರೆಹೊರೆಯವರು ಕೂಡ ದಾದಿ ಜೊತೆ ಇರುವಾಗ ಮಗು ತುಂಬಾ ಅಳುತ್ತದೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ, ಆಕೆಯ ಮೇಲೆ ನಿಗಾವಹಿಸುವ ಉದ್ದೇಶದಿಂದ ಮನೆಯಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಿದ್ದರು. ನಿನ್ನೆ ಮಗುವಿನ ಮೇಲೆ ದಾದಿ ನಿರ್ದಾಕ್ಷಿಣ್ಯವಾಗಿ ಹಲ್ಲೆ ಮಾಡಿದ್ದಾಳೆ. ಹೀಗಾಗಿ, ಅದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದೆ.

ಸದ್ಯ ಮಗುವಿನ ಮೆದುಳಿನಲ್ಲಿ ರಕ್ತಸ್ರಾವವಾಗಿರುವ ಕಾರಣ ಸಮೀಪದ ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿ ದಾಖಲಿಸಲಾಗಿದೆ. ಘಟನೆ ಕುರಿತಂತೆ ಮಗುವಿನ ಪೋಷಕರು ಸೂರತ್ ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.