8 ವರ್ಷದ ಬಾಲಕನ ಗುಪ್ತಾಂಗಕ್ಕೆ ದಾರ ಕಟ್ಟಿದ ಸಹಪಾಠಿಗಳು!

67
firstsuddi

ನವದೆಹಲಿ : ವಿದ್ಯಾರ್ಥಿಗಳ ಗುಂಪೊಂದು 8 ವರ್ಷದ ಬಾಲಕನ ಖಾಸಗಿ ಅಂಗಕ್ಕೆ ದಾರ ಕಟ್ಟಿರುವ ಆಘಾತಕಾರಿ ಘಟನೆಯೊಂದು ರಾಷ್ಟ್ರ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.

ದಕ್ಷಿಣ ದೆಹಲಿಯ ಕಿದ್ವಾಯಿ ನಗರದ ಅಟಲ್ ಅದ್ರಾಶ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಎಂಟು ವರ್ಷದ ಬಾಲಕನ ಗುಪ್ತಾಂಗಕ್ಕೆ ವಿದ್ಯಾರ್ಥಿಗಳು ನೈಲಾನ್ ದಾರವನ್ನು ಕಟ್ಟಿದ್ದಾರೆ. ಡಿಸೆಂಬರ್ 28ರಂದು ಸ್ನಾನದ ಸಮಯದಲ್ಲಿ ಮಗುವಿನ ಪೋಷಕರು ಅದನ್ನು ಗಮನಿಸಿದ್ದಾರೆ ಎಂದು ದಕ್ಷಿಣ ಉಪ ವಿಭಾಗದ ಪೊಲೀಸ್ ಆಯುಕ್ತ ಚಂದನ್ ಚೌಧರಿ ಹೇಳಿದ್ದಾರೆ.

ಬಾಲಕನ ಗುಪ್ತಾಂಗಕ್ಕೆ ದಾರ ಕಟ್ಟಿದ್ದರಿಂದ ಆ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯವರು ಪಿಸಿಆರ್ ಗೆ ಮಾಹಿತಿ ನೀಡಿದ್ದು, ತನಿಖಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಚಿಕಿತ್ಸೆ ಮತ್ತು ಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ಸದ್ಯ ಬಾಲಕ ವೈದ್ಯರ ನಿಗಾದಲ್ಲಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆರೋಪಿ ವಿದ್ಯಾರ್ಥಿಗಳನ್ನು ಗುರುತಿಸಲು ಬಾಲಕ ಸಮೇತ ಪೊಲೀಸರು ಶಾಲೆಗೆ ಭೇಟಿ ನೀಡಲಿದ್ದಾರೆ ಎಂದು ಡಿಸಿಪಿ ಚೌಧರಿ ತಿಳಿಸಿದ್ದಾರೆ.