9 ದಿನಗಳ ವಿರಾಮದ ನಂತರ ಮತ್ತೆ ಭಾರತ್ ಜೋಡೋ ಯಾತ್ರೆ ಪುನರಾರಂಭ…

37
firstsuddi

ಲಕ್ನೋ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ 9 ದಿನಗಳ ವಿರಾಮ ಪಡೆದು ಇಂದು ಮತ್ತೆ ಪುನರಾರಂಭವಾಗುತ್ತಿದೆ. ಯಾತ್ರೆ ದೆಹಲಿಯಿಂದ ಉತ್ತರ ಪ್ರದೇಶ ಕಡೆಗೆ ಸಾಗುತ್ತಿದೆ.

ದಕ್ಷಿಣದ ರಾಜ್ಯದಿಂದ ಪ್ರಾರಂಭವಾದ ಪಾದಯಾತ್ರೆ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಹೊರಟು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಸಂಚರಿಸಿದೆ. ಜನವರಿ 26 ರಂದು ಯಾತ್ರೆ ಶ್ರೀನಗರ ತಲುಪಲಿದ್ದು, ಅಲ್ಲಿ ಕೊನೆಗೊಳ್ಳಲಿದೆ.

ಭಾರತ್ ಜೋಡೋ ಯಾತ್ರೆ ಸಂಪನ್ನದ ಬಳಿಕ ದೇಶಾದ್ಯಂತ ಯಾತ್ರೆಯ ಸಂದೇಶವನ್ನು ಹರಡುವ ಉದ್ದೇಶದಿಂದ ‘ಹಾಥ್ ಸೆ ಹಾಥ್ ಜೋಡೋ’ ಅಭಿಯಾನವನ್ನು ಪ್ರಾರಂಭಿಸಲು ಕಾಂಗ್ರೆಸ್ ಯೋಜಿಸಿದೆ. ಮೂಲಗಳ ಪ್ರಕಾರ ರಾಹುಲ್ ಸಹೋದರಿ, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ದೇಶಾದ್ಯಂತ ‘ಹಾಥ್ ಸೆ ಹಾಥ್ ಜೋಡೋ’ ಅಭಿಯಾನವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಮುಖ್ಯವಾಗಿ ಮಹಿಳೆಯರನ್ನು ಕೇಂದ್ರೀಕರಿಸುವುದು ಇದರ ಉದ್ದೇಶವಾಗಿದೆ.