90ರ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ 20ರ ಯುವಕ…!

293
firstsuddi

ಚೆನ್ನೈ : 90 ವರ್ಷದ ವೃದ್ಧೆ ಮೇಲೆ 20 ವರ್ಷದ ಯುವಕ ಅತ್ಯಾಚಾರ ಎಸಗಿರುವ ಆಶ್ಚರ್ಯಕರ ಘಟನೆ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿ ನಡೆದಿದೆ. ಕಾಮುಕನನ್ನು ಮೈಡೀನ್ ಎಂದು ಗುರುತಿಸಲಾಗಿದೆ. 90 ವರ್ಷದ ವೃದ್ಧೆ ತಮ್ಮ ಜಮೀನನಲ್ಲಿ ಇರುವ ತಮ್ಮ ಮನೆಯ ರೂಮಿನಲ್ಲಿ ಮಲಗಿದ್ದ ವೇಳೆ ಮದ್ಯದ ಅಮಲಿನಲ್ಲಿದ್ದ ಆರೋಪಿ ಕಾಮುಕ ಮನೆಯೊಳಗೆ ನುಗ್ಗಿ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಕೂಡಲೇ ವೃದ್ಧೆ ಜೋರಾಗಿ ಕೂಗಿಕೊಂಡಿದ್ದಾರೆ. ತಾಯಿಯ ಕೂಗಿಕೊಳ್ಳುತ್ತಿರುವುದನ್ನು ಕೇಳಿ ಪಕ್ಕದ ಕೋಣೆಯಲ್ಲಿದ್ದ ಮಗ ಬಂದು ವೃದ್ಧೆಯನ್ನು ರಕ್ಷಿಸಿದ್ದು, ಆರೋಪಿ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಘಟನೆ ನಡೆದ ಮರುದಿನ ಆರೋಪಿಯನ್ನು ಹಿಡಿದು ಪೊಲ್ಲಾಚಿಯ ಪಶ್ಚಿಮ ಠಾಣೆಗೆ ಒಪ್ಪಿಸಿದ್ದು, ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.