ಬೆಂಗಳೂರು:ಗಾಯಕಿ ಚಿನ್ಮಯಿ ಶ್ರೀಪಾದ ಅವರು ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ವಿರುದ್ಧ ಆರೋಪ ಮಾಡಿದ್ದು, ಚಿನ್ಮಯ್ ತನ್ನ ಸ್ನೇಹಿತೆಯರಿಗೆ ಆದ ಅನುಭವಗಳನ್ನು ಎರಡು ಪತ್ರಗಳ ಮೂಲಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು ಈ ಹಿನ್ನಲೆಯಲ್ಲಿ ರಘು ದೀಕ್ಷಿತ್ ಅವರು ಪ್ರತಿಕ್ರಯಿಸಿದ್ದು, ಚಿನ್ಮಯಿ ಹೇಳಿರುವ ವ್ಯಕ್ತಿಗೆ ನಾನು ಈ ಹಿಂದೆಯೇ ಸಾರ್ವಜನಿಕವಾಗಿಯೂ ಮತ್ತು ಖಾಸಗಿಯಾಗಿಯೂ ಕ್ಷಮೆ ಕೋರಿದ್ದೆ. ಇನ್ನೊಮ್ಮೆ ಕೇಳುತ್ತೇನೆ. ಆ ಘಟನೆ ಹೇಗೋ ನಡೆದು ಹೋಯಿತು. ಆದರೆ ಅವರು ವಿವರಿಸಿದಂತೆ ಅಲ್ಲ. ರೆಕಾರ್ಡಿಂಗ್ ಬಳಿಕ ಒಂದು ಹಗ್ ಕೊಟ್ಟಿದ್ದೆ. ಅದೇ ರೀತಿ ಚುಂಬಿಸಲು ಪ್ರಯತ್ನಿಸಿದೆ. ಆದರೆ ಅವರು ತಡೆದ ಕಾರಣ ಆ ರೀತಿ ಮಾಡಲಾಗಲಿಲ್ಲ. ಬಳಿಕ ನಾನು ಸ್ಟುಡಿಯೋದಿಂದ ಹೊರಟು ಹೋದೆ. ಅವರು ನನ್ನ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು ಇದು ಸಮರ್ಥನೆಯಲ್ಲ. ಮತ್ತೊಮ್ಮೆ ಕ್ಷಮೆ ಕೋರುತ್ತೇನೆ ಎಂದು ರಘು ದೀಕ್ಷಿತ್ ಹೇಳಿದ್ದಾರೆ.











