ಶಬರಿಮಲೆಯ ಹಿಂದಿನ ಸಂಪ್ರದಾಯ ಉಳಿಯಲಿ: ವೀರೇಂದ್ರ ಹೆಗ್ಗಡೆ…

200
firstsuddi

ಮಂಗಳೂರು: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಶಬರಿಮಲೆ ದೇವಸ್ಥಾನಕ್ಕೆ ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯಗಳನ್ನು ಉಳಿಸಿಕೊಂಡು ಹೋದರೆ ಉತ್ತಮ. ಶಬರಿಮಲೆಗೆ ಹೋಗುವವರು 48 ದಿವಸಗಳ ವ್ರತ ಮಾಡುವ ನಿಯಮವಿದೆ. ಮನೋನಿಗ್ರಹ, ಸಂಯಮದ ಪಾಲನೆ ಅಲ್ಲಿ ಮುಖ್ಯವಾಗುತ್ತದೆ. ಆದರೆ ಈಗ ನಾಲ್ಕು ದಿನ, ಎರಡು ದಿನ, ವ್ರತಚಾರಣೆ ಮಾಡಿ ಶಬರಿ ಮಲೆಗೆ ಹೋಗುವವರಿದ್ದಾರೆ. ಇದು ಒಳ್ಳೆಯ ಕ್ರಮವಲ್ಲ. ದೇವಸ್ಥಾನ ಪ್ರವೇಶಿಸಿದರೆ ಏನೋ ಆಗುತ್ತದೆ ಎಂದಲ್ಲ, ಪಾರಂಪರಿಕ ಪದ್ದತಿ ಅನುಸರಿಸುವುದು ಸೂಕ್ತ ಎಂದಿದ್ದಾರೆ.