ಮೂಡಿಗೆರೆ: ಕಾಡಾನೆ ದಾಳಿಯಿಂದ ವ್ಯಕ್ತಿ ಸಾವನಪ್ಪಿರುವ ಘಟನೆ ಮೂಡಿಗೆರೆಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ ಗ್ರಾಮದ ಸಮೀಪ ತೋಟದಿಂದ ಮನೆಗೆ ಬರುವಾಗ ವ್ಯಕ್ತಿಮೇಲೆ ಕಾಡಾನೆ ಏಕಾ ಏಕಿ ದಾಳಿ ಮಾಡಿದೆ. ಕಾಡಾನೆ ದಾಳಿಯಲ್ಲಿ ಗುತ್ತಿ ಗ್ರಾಮದ ಸುನೀಲ್(35) ಗಂಭೀರ ಗಾಯಾಗೊಂಡಿದ್ದು, ಗಾಯಾಗೊಂಡ ಸುನೀಲ್ ಅವರನ್ನು ಕೂಡಲೇ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಗೆ ಹಾಸನ ಆಸ್ಪತ್ರೆ ರವಾನೆ ಮಾಡುವಾಗ ಬೇಲೂರು ಸಮೀಪ ಸುನೀಲ್ ಮಾರ್ಗಮದ್ಯೆ ಸಾನಪ್ಪಿದ್ದಾರೆ. ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು,ಬಣಕಲ್ ಪೊಲೀಸ್ ರಾಣೆ ಪ್ರಕರಣ ದಾಖಲಾಗಿದೆ..










