ವೈಎಸ್​ಆರ್​ ​ ನಾಯಕ ಜಗನ್​ ರೆಡ್ಡಿಗೆ ದುಷ್ಕರ್ಮಿ ಯಿಂದ ಚಾಕು ಇರಿತ…

289
firstsuddi

ಆಂಧ್ರಪ್ರದೇಶ : ವೈಎಸ್​ ಆರ್​ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಜಗನ್​ ಮೋಹನ್ ರೆಡ್ಡಿಗೆ ವಿಶಾಖಪಟ್ಟಣಂ ಏರ್ ಪೋರ್ಟ್ ​ ನಲ್ಲಿ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ವಿಶಾಖಪಟ್ಟಣಂ ಏರ್ ಪೋರ್ಟ್ ನಲ್ಲಿ ಜಗನ್ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ನೆಪದಲ್ಲಿ ದುಷ್ಕರ್ಮಿಯೊಬ್ಬ ಅವರಿಗೆ ಚೂಕುವಿನಿಂದ ಇರಿದಿದ್ದು, ಚೂರಿ ಇರಿತದಿಂದ ಜಗನ್ ಅವರ ಭುಜಕ್ಕೆ ಗಾಯವಾಗಿದ್ದು, ವಿಮಾನ ನಿಲ್ದಾಣದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಆರೋಪಿಯನ್ನು ಏರ್​​​ಪೋರ್ಟ್​​ ಪೊಲೀಸರು ವಶಕ್ಕೆ ಪಡೆದಿದ್ದು,  ಜಗನ್​ ರೆಡ್ಡಿ  ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.