ಫಸ್ಟ್ ಸುದ್ದಿ : ಮೀಟೂ ಅಭಿಯಾನ ದಾರಿ ತಪ್ಪುತ್ತಿದೆ ಎಂದು ಮೀಟೂ ಸಂಸ್ಥಾಪಕಿ ತರಾನಾ ಬರ್ಕ್ ಅವರು ಬೇಸರ ವ್ಯಕ್ತಪಡಿಸಿದ್ದು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಮೀಟೂ ಅಭಿಯಾನ ಪ್ರಾರಂಭವಾಗಿದೆ.ಮೀಟೂ ಅಭಿಯಾನದ ಪ್ರಾರಂಭದಲ್ಲಿ ಶೋಷಣೆಗೊಳಗಾದ ಸಾಕಷ್ಟು ಸಂತ್ರಸ್ತರು ಮುಂದೆ ಬಂದರು. ಅಭಿಯಾನದ ಪ್ರಾರಂಭದಲ್ಲಿ ಸಾಕಷ್ಟು ಯಶಸ್ವಿ ಕಂಡಿದ್ದು, ಸಂತ್ರಸ್ತರಿಗೆ ಉತ್ತಮ ಬೆಂಬಲ ನೀಡಿತು. ಆದರೆ ಇತ್ತೀಚೆಗೆ ಮೀ ಟೂ ಅಭಿಯಾನ ದಾರಿ ತಪ್ಪುತ್ತಿದೆ. ಕೆಲವರು ಇದನ್ನು ವೈಯಕ್ತಿಕ ಲಾಭಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಅನಗತ್ಯ ನಿಂದನೆಗೆ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಬಳಕೆಯಾಗುತ್ತಿದೆ ಎಂದು ಮಾಧ್ಯಮವೊಂದಕ್ಕೆ ತರಾನಾ ಬರ್ಕ್ ಹೇಳಿದ್ದಾರೆ.










