ಬೆಂಗಳೂರು :ಕೀರ್ತಿಗೌಡ ಮೇಲೆ ನಾಗರತ್ನ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳು ಬಿಡುಗಡೆಯಾದ ದಿನದಿಂದ ನಾಗರತ್ನ ಅವರು ನಾಪತ್ತೆಯಾಗಿದ್ದು, ಗಿರಿನಗರ ಪೊಲೀಸರು ನಾಗರತ್ನ ಅವರನ್ನು ಹುಡುಕುತ್ತಿದ್ದಾರೆ. ನಾಗರತ್ನಅವರ ಫೋನ್ ಸ್ವಿಚ್ ಆಫ್ ಆಗಿದ್ದು, ಬೆಂಗಳೂರಿನ ಅನೇಕಲ್, ಅತ್ತಿಬೆಲೆ, ಹೊಸೂರು ಸೇರಿದಂತೆ ಹಲವೆಡೆ ನಾಗರತ್ನ ಸಂಬಂಧಿಗಳ ಮನೆಯಲ್ಲಿ ನಾಗರತ್ನ ಅವರನ್ನು ಪೊಲೀಸರು ಹುಡುಕುತ್ತಿದ್ದು, ನಾಗರತ್ನ ಸುಳಿವು ಪೊಲೀಸರಿಗೆ ಸಿಗುತ್ತಿಲ್ಲ. ನಾಗರತ್ನ ಅವರು ವಕೀಲರೊಂದಿಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.










