ನಿರ್ದೇಶಕ ರವಿ ಶ್ರೀವತ್ಸಗೆ  ಬಹಿರಂಗವಾಗಿ ಕ್ಷಮೆ ಕೇಳಿದ ನಟಿ  ಸಂಜನಾ

209

ಬೆಂಗಳೂರು: ಮೀ ಟೂ ಅಭಿಯಾನದಲ್ಲಿ ಗಂಡ ಹೆಂಡತಿ ಚಿತ್ರದ ನಿರ್ದೇಶಕ ರವಿ ಶ್ರೀವತ್ಸಾ ಮೇಲೆ ಆರೋಪ ಮಾಡಿದ್ದ ನಟಿ ಸಂಜನಾ ಗಲ್ರಾನಿ ಅವರು ಇಂದು ಕಲಾವಿದರ ಸಂಘ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ  ನಡೆದ ಸಭೆಯಲ್ಲಿ ಬಹಿರಂಗ ಕ್ಷಮೆ ಕೇಳಿದ್ದಾರೆ. ನಾನು ಯಾರ ಮನಸ್ಸು ನೋಯಿಸುವ ಉದ್ದೇಶದಿಂದ ಆರೋಪ ಮಾಡಲಿಲ್ಲ. ಸಿನಿಮಾದ ಚಿತ್ರೀಕರಣದ ವೇಳೆ ನನಗಾದ ಅನುಭವವನ್ನು ಹೇಳಿಕೊಂಡಿದ್ದೇನೆ. ನನ್ನ ಉದ್ದೇಶ ಯಾರ ಹೆಸರು ಹಾಗೂ ಜೀವನವನ್ನು ಹಾಳು ಮಾಡಬೇಕೆಂದು ಇರಲಿಲ್ಲಹಿರಿಯರಾದ ನಟ ಅಂಬರೀಶ್, ಹಾಗೂ ರಾಕ್‍ಲೈನ್ ವೆಂಕಟೇಶ್ ಅವರ ಮಾತಿಗೆ ಬೆಲೆಕೊಟ್ಟು ಕ್ಷಮೆಯನ್ನು ಕೋರುತ್ತೇನೆ ಎಂದಿದ್ದಾರೆ.