ಕಳಸ:ತಾಯಿಗೆ ಹೊಡೆದು ಮಗ ಆತ್ಮಹತ್ಯೆ…

2611
firstsuddi

ಮೂಡಿಗೆರೆ: ಕಳಸ ಸಮೀಪದ ಎಸ್.ಕೆ.ಮೇಗಲ್ ಕುಂದಾಡಿ ದೇವರಮಕ್ಕಿ ಪ್ರೇರಣ್ (18) ಅತ್ಮಹತ್ಯೆ ಮಾಡಿಕೊಂಡ ಯುವಕ.
ಎಸ್.ಡಿ.ಎಂ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಈತ ಕಳೆದ ಮೂರು ತಿಂಗಳಿನಿಂದ ಕಾಲೇಜು ಬಿಟ್ಟು ಮನೆಯಲ್ಲಿದ್ದ. ಬುಧವಾರದ ರಾತ್ರಿ ತಾಯಿ ಮಗನಿಗೆ ಬುದ್ದಿವಾದ ಹೇಳುತ್ತಿದ್ದ ಸಂದರ್ಭದಲ್ಲಿ ಮಗ ತಾಯಿಗೆ ಹೊಡೆದಿದ್ದಾನೆ.ಈ ಸಂದರ್ಭದಲ್ಲಿ ತಾಯಿ ಮೂರ್ಚೆ ತಪ್ಪಿ ಬಿದ್ದಾಗ,ತಾಯಿ ಸತ್ತು ಹೋದಳು ಎಂದು ತಿಳಿದುಕೊಂಡ ಮಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತಾಯಿಯ ತಲೆಗೆ ಹೊಡೆತ ಬಿದ್ದಿದ್ದು,ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಪ್ರಕರಣ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.