ಮೂಡಿಗೆರೆ : ಮೂಡಿಗೆರೆ ನಗರದಿಂದ ಹಾಂದಿವರೆಗೂ KSRTC ಬಸ್ ಗೆ ಸೈಡ್ ಬಿಡದೆ ಎಣ್ಣೆ ನಶೆಯಲ್ಲಿ ಬೈಕ್ ಸವಾರ ಕಿರಿಕ್ ಮಾಡಿರುವ ಘಟನೆ ನಡೆದಿದ್ದು, ಮಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದ ಬಸ್ ಗೆ ಕುಡುಕ ಬೈಕ್ ಸವಾರನೋರ್ವ 15 ಕಿ.ಮೀವರೆಗೂ ಬಸ್ ಗೆ ಸೈಡ್ ಬಿಡದೆ ಕಿರಿಕ್ ಮಾಡಿದ್ದಾನೆ. ಇದರಿಂದ ಚಿಕ್ಕಮಗಳೂರು ಮಂಗಳೂರು ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬೈಕ್ ಸವಾರನ ವರ್ತನೆಯಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಫಜೀತಿ ಅನುಭವಿಸಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಬೈಕ್ ಸವಾರನ ವರ್ತನೆ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ಮೂಡಿಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.









