ತಮಿಳುನಾಡಿಗೆ ಅಪ್ಪಳಿಸಿದ ಗಜ ಚಂಡಮಾರುತ…

571
firstsuddi

ಚೆನ್ನೈ:ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಗಜ ಚಂಡಮಾರುತ  ತಮಿಳುನಾಡು ಮತ್ತು ಪುದುಚೇರಿಗೆ ಅಪ್ಪಳಿಸಿದ್ದು, ಗಂಟೆಗೆ  120.ಮೀ. ವೇಗದಲ್ಲಿ ಪಂಬನ್ -ಕಡಲೂರು ತೀರ ಪ್ರವೇಶಿಸಿದ್ದು,  ತಮಿಳುನಾಡು ಮತ್ತು ಪುಡಿಚೆರಿ ಕರಾವಳಿ ತೀರ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ. ಚಂಡಮಾರುತದಿಂದಾಗಿ ಆರು ಮಂದಿ ಮೃತಪಟ್ಟಿದ್ದು, 76 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ  ಸ್ಥಳಾಂತರಿಸಲಾಗಿದೆ.  ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ  ತಂಜಾವೂರು, ತಿರುವೂರು, ಕಡಲೂರು, ರಾಮನಾಥಪುರಂ, ನಾಗಪಟ್ಟಣಂ, ಪುದುಕೊಟ್ಟಾಯ್ ಗಳ  ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ತಮಿಳುನಾಡಿನ ಉತ್ತರ ಕರಾವಳಿ ಭಾಗದಲ್ಲಿ ಅಪ್ಪಳಿಸಿದ್ದು, ಮೀನುಗಾರರಿಗೆ ಸಮುದ್ರ ತೀರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.