ಗಜ ಚಂಡ ಮಾರುತದ ಪ್ರಭಾವದಿಂದ ರಾಜಧಾನಿ ಸೇರಿದಂತೆ ಹಲವೆಡೆ ಮಳೆ ಸಾಧ್ಯತೆ…

545
firstsuddi

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಗಜ ಚಂಡಮಾರುತದ ತಮಿಳುನಾಡು ಮತ್ತು ಪುದುಚೇರಿಗೆ ಪ್ರವೇಶಿಸಿದ್ದು, ಗಜ ಚಂಡಮಾರುತದ ಪ್ರಭಾವದಿಂದ ಈಗಾಗಲೇ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ರಾಜ್ಯದ   ಬೆಂಗಳೂರು, ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ  ಹಾಗೂ  ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಎರಡ್ಮೂರು ದಿನ ರಾಜ್ಯದಲ್ಲಿ ಮಳೆಯಾಗಲಿದೆ  ಹಾಗೂ ಈ ಸಂದರ್ಭದಲ್ಲಿ ಗಾಳಿ ವೇಗ ಗಂಟೆಗೆ 80-90 ಕಿ.ಮೀ  ಇರಲಿದೆ ಎಂದು  ಹವಾಮಾನ  ಇಲಾಖೆ ಮೂಲಗಳಿಂದ ತಿಳಿದುಬಂದಿದೆ.