ಮೇಯರ್​ ಆಯ್ಕೆ ಹೈಕಮಾಂಡ್ ತೀರ್ಮಾನದಂತೆ ನಡೆದಿದೆ: ಜಿ.ಟಿ.ದೇವೇಗೌಡ…

220
firstsuddi

ಮೈಸೂರು: ಮೇಯರ್​ ಆಯ್ಕೆ ಬಗ್ಗೆ ಪ್ರತಿಕ್ರಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಮೈಸೂರಿನಲ್ಲಿ ನಮ್ಮದೇನೂ ನಡೆಯಲ್ಲ. ಎಲ್ಲಾ ಹೈಕಮಾಂಡ್ ತೀರ್ಮಾನದಂತೆಯೇ ನಡೆದಿದೆ. ವರಿಷ್ಠರು ಹೇಳಿದಕ್ಕೆ  ಒಪ್ಪಿಕೊಂಡಿದ್ದೇವೆ.ಹೈಕಮಾಂಡ್ ಹೇಳಿದಂತೆ ಅವರ  ಮಾತಿಗೆ ತಲೆ ಬಾಗುತ್ತೇವೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ನಮಗೆ 3ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ನಾವು ಅವರಿಗೆ 2ಸ್ಥಾನ ಬಿಟ್ಟುಕೊಟ್ಟಿದ್ದೆವು. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಚರ್ಚಿಸಲಾಗಿದೆ. ಆದ್ದರಿಂದ ಮೇಯರ್ ಸ್ಥಾನ ತ್ಯಾಗ ಮಾಡಿದ್ದೇವೆ ಎಂದಿದ್ದೇವೆ.