ಬೆಳಗಾವಿಯ ಖಾನಾಪುರ ಬಂದ್​ಗೆ ಕರೆ…

729
firstsuddi

ಬೆಳಗಾವಿ:ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನಾನಿರತರು ರೈತರಲ್ಲ ದರೋಡೆಕೋರರು ಎಂದಿದ್ದಲ್ಲದೇ, ರೈತ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಾಲ್ಕು ವರ್ಷದಿಂದ ನೀನು ಎಲ್ಲಿ ಮಲಗಿದ್ದೆ? ಎಂದು ಪ್ರಶ್ನಿಸಿರುವುದು, ಹಾಗೂ ರೈತ ಅಶೋಕ್ ಯಮಕನಕರಡಿ ಮೇಲೆ ಪೊಲೀಸರು ಹಲ್ಲೆ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇನ್ನು ಬೆಳಗಾವಿಯ ಖಾನಪುರದ ರೈತ ಮಹಿಳೆ ಜಯಶ್ರೀ ಬಗ್ಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹಗುರವಾಗಿ  ಮಾತನಾಡಿರುವ ಬಗ್ಗೆ ಖಂಡಿಸಿ  ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖಾನಾಪುರ ಬಂದ್ ಗೆ ಕರೆ ನೀಡಲಾಗಿದೆ.