ಪ್ರವಾಸಿಗರು ಬಲ್ಲಾಳರಾಯನ ದುರ್ಗದ ಅರಣ್ಯದಲ್ಲಿ ರಾತ್ರಿ ಠಿಕಾಣಿ, ಅರಣ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ…

262
firstsuddi

ಮೂಡಿಗೆರೆ:ಬಲ್ಲಾಳರಾಯನ ದುರ್ಗದ ಮೀಸಲು ಅರಣ್ಯದಲ್ಲಿ ಅತಿಕ್ರಮ ಪ್ರವೇಶ ನಿಷೇಧವಿದ್ದರೂ ಪ್ರವಾಸಿಗರು ರಾತ್ರಿ ಮೀಸಲು ಅರಣ್ಯದಲ್ಲಿ ಠಿಕಾಣಿ ಹೂಡುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಮೌನ ವಹಿಸಿರುವುದು ಪರಿಸರ ಆಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಬಲ್ಲಾಳರಾಯನ ದುರ್ಗದ ಅರಣ್ಯ ಪ್ರದೇಶದಲ್ಲಿ ವಾರಾಂತ್ಯ ದಿನಗಳಲ್ಲಿ ಹೊರಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರು ಮೀಸಲು ಅರಣ್ಯದಲ್ಲಿ ಟೆಂಟ್‍ಗಳನ್ನು ನಿರ್ಮಿಸಿ ಬೆಂಕಿ ಹಾಕಿಕೊಂಡು ಪೈರ್ ಕ್ಯಾಂಪ್ ನಡೆಸಿ ತಾವು ತಂದ ಬಾಟಲಿ ಪ್ಲಾಸ್ಟಿಕ್‍ಗಳನ್ನು ಅಲ್ಲಿಯೆ ಎಸೆದು ಪರಿಸರವನ್ನು ಮಲಿನಗೊಳಿಸುತ್ತಿದ್ದಾರೆ. ವಿವಿಧ ಸಂಘ ಸಂಸ್ಥೆಗಳು ಸ್ವಚ್ಛತಾ ಅಭಿಯಾನದ ಮೂಲಕ ಅರಣ್ಯದಲ್ಲಿರುವ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛತಾ ಆಂದೋಲನಾ ನಡೆಸುತ್ತಿದ್ದರೆ ಸ್ವಚ್ಛತೆ ನಡೆಸಿ ಅರಣ್ಯ ಪ್ರದೇಶವನ್ನು ಕೆಲ ಪ್ರವಾಸಿಗರು ಮೋಜುಮಸ್ತಿಯ ಮೂಲಕ ಮಲಿನಗೊಳಿಸುತ್ತಿರುವುದು ದುರದುಷ್ಟಕರ ಸಂಗತಿಯಾಗಿದೆ.
ರಾತ್ರಿ ಸಮಯದಲ್ಲಿ ಟೆಂಟ್ ಹಾಕಿ ಪೈರ್ ಕ್ಯಾಂಪ್ ನಡೆಸುವ ಪ್ರವಾಸಿಗರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಣ ಪಡೆದು ಮೀಸಲು ಅರಣ್ಯದಲ್ಲಿ ಹೋಗಲು ಅನುಮತಿ ನೀಡಲಾಗುತ್ತಿದ್ದೆ ಎಂದು ಹೆಸರು ಹೇಳಲು ಇಚ್ಚಿಸದ ಮಣಿಪಾಲ ಮೂಲದ ಪ್ರವಾಸಿಗರೊಬ್ಬರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಿ ಅತಿಕ್ರಮ ಪ್ರವೇಶ ಮಾಡಿ ಮೋಜುಮಸ್ತಿಯಲ್ಲಿ ತೊಡಗುವ ಪ್ರವಾಸಿಗರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಈ ಅರಣ್ಯ ಪ್ರದೇಶವೂ ಮಂಗಳೂರು ಮೂಡಿಗೆರೆ ಮತ್ತು ಕೊಪ್ಪ ಅರಣ್ಯ ವಲಯ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಮೋಜುಮಸ್ತಿ ಮಾಡುವ ಪ್ರವಾಸಿಗರ ಮೇಲೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರೆ ನಮ್ಮ ವಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಮೂರು ವಲಯಗಳ ಅರಣ್ಯ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.