ಕೊಪ್ಪ :13 ಅಡಿಯ ಬೃಹತ್ ಕಾಳಿಂಗ ಸರ್ಪ ಸೆರೆ…

236

ಚಿಕ್ಕಮಗಳೂರು : ಬೃಹತ್  ಗಾತ್ರದ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿದಿರುವ ಘಟನೆ  ಕೊಪ್ಪ ತಾಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೈತ್ರಾ ಕುಮಾರ್‌ ಎಂಬುವವರ ಮನೆಯಲ್ಲಿ ಒಂದು ವಾರದಿಂದ ಮನೆಯಲ್ಲೇ ವಾಸವಿದ್ದ  13 ಅಡಿಯ ಕಾಳಿಂಗ ಸರ್ಪ‌ ವನ್ನು ಕಂಡು ಮನೆಯವರು ಭಯಭೀತರಾಗಿದ್ದರು.ಕಾಳಿಂಗನನ್ನು ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಸ್ನೇಕ್ ಹರೀಂದ್ರ ಅವರು ಒಂದು ಗಂಟೆ ಕಾರ್ಯಚರಣೆ ನಡೆಸಿ ಸೆರೆ ಹಿಡಿದು   ಕಾಡಿಗೆ ಬಿಟ್ಟಿದ್ದಾರೆ.