ಮೂಡಿಗೆರೆ : ಸಂಪಿಗೆ ಹೂವಿನ ವಾಸನೆ ಹೀರುತ್ತಿದ್ದ ನಾಗರಹಾವು ಸೆರೆಯಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದ್ದು, ನಾಗರಹಾವಿಗೆ ತೆಂಗಿನಮರದ ಸುಳಿ ಹಾಗೂ ಸಂಪಿಗೆ ಮರವೆಂದರೆ ಬಲು ಪ್ರಿಯ. ಈ ಹಿನ್ನಲೆ ತಾಲೂಕಿನ ಕೊಟ್ಟಿಗೆಹಾರದ ನಿರ್ಮಲ ಎಸ್ಟೇಟಿನ ಲೈನ್ ಮನೆ ಬಳಿ ನಾಗರಹಾವು ಸಂಪಿಗೆ ಹೂವಿನ ವಾಸನೆ ಹೀರುತ್ತಿದ್ದ ದೃಶ್ಯವನ್ನು ಕಂಡ ಕಾರ್ಮಿಕರು ಭಯಭೀತರಾಗಿದ್ದರು.
ಈ ವೇಳೆ ಸ್ನೇಕ್ ಆರೀಫ್ ಅವರು ಹಾವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.









