ಬೆಳಗಾವಿಯಲ್ಲಿ ಮುಂದುವರಿದ ಪ್ರತಿಭಟನೆ….

229
firstsuddi

ಬೆಳಗಾವಿ: ಕಬ್ಬು ಬೆಳೆಗೆ ಬೆಲೆ ನಿಗದಿ, ಬಾಕಿ ಹಣ ಕೊಡಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಮೂರನೇ ದಿನವಾದ ಇಂದು ಕೊಡ ಮುಂದುವರೆದಿದ್ದು, ಬೆಳಗಾವಿ ಡಿಸಿ ಕಚೇರಿ ಗೇಟ್‌ ಗೆ ಹಸಿರು ಶಾಲ್‌ ಕಟ್ಟಿ ಸಂಪೂರ್ಣ ಬಂದ್ ಮಾಡಲಾಗಿದ್ದು, ಕಚೇರಿ ಎದುರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದನಗೌಡ ಮೊದಗಿ ಅವರು ಆಮರಣಾಂತ ಉಪವಾಸ ಕೈಗೊಂಡಿದ್ದಾರೆ. ಇವರ ಜೊತೆ ಚೂನಪ್ಪಾ ಪೂಜಾರಿ, ಜಯಶ್ರೀ, ರಾಘವೇಂದ್ರ ನಾಯಕ ಸೇರಿದಂತೆ ಹಲವಾರು  ಭಾಗಿಯಾಗಿದ್ದಾರೆ.