ಈರುಳ್ಳಿ ಬೆಲೆ ಕುಸಿತ: ಟ್ವಿಟ್ ಮೂಲಕ ಪ್ರಧಾನಿಗೆ ರೈತನ ಮನವಿ…

414
firstsuddi

ಬಾಗಲಕೋಟೆ: ಈರುಳ್ಳಿ ಬೆಲೆ ಕುಸಿತದಿಂದ ರೈತರು  ಕಂಗಾಲಾಗಿದ್ದಾರೆ. ಈ  ಬಗ್ಗೆ ಗಮನ ಹರಿಸುವಂತೆ ಬಾಗಲಕೋಟೆಯ  ರೈತ  ಪ್ರಶಾಂತ್  ಎಂಬುವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದು, ರೈತ ಖರ್ಚು ಮಾಡಿದ ಹಣ ಕೂಡ ಸಿಗುತ್ತಿಲ್ಲ. ಹೀಗಾಗಿ‌ ರೈತ ಸಾಲದ‌ ಸುಳಿಗೆ ಸಿಕ್ಕಿಹಾಕಿಕೊಳ್ಳುತ್ತಿದ್ದಾನೆ .ಈರುಳ್ಳಿ ಬೆಳೆಯುವುದಕ್ಕೆ ಆಗುವ ಖರ್ಚು, ನಷ್ಟದ ಬಗ್ಗೆ ಪಟ್ಟಿಯನ್ನು ಬರೆದು  ನಮ್ಮ ಸಮಸ್ಯೆಗೆ ಗಮನ ಹರಿಸಿ ಎಂದು ಪ್ರಶಾಂತ್ ಅವರು  ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಟ್ವಿಟರ್​ ಮೂಲಕ ಮನವಿ ಮಾಡಿದ್ದಾರೆ.

firstsuddi