ಕೊಟ್ಟಿಗೆಹಾರದ ನಿರ್ಮಲ ಎಸ್ಟೇಟ್ ನಲ್ಲಿ  ಸಂಪಿಗೆ ಹೂವಿನ ವಾಸನೆ ಹೀರುತ್ತಿದ್ದ ನಾಗರಹಾವು ಸೆರೆ…

880

ಮೂಡಿಗೆರೆ : ಸಂಪಿಗೆ ಹೂವಿನ ವಾಸನೆ ಹೀರುತ್ತಿದ್ದ ನಾಗರಹಾವು ಸೆರೆಯಾಗಿರುವ ಘಟನೆ  ತಾಲೂಕಿನಲ್ಲಿ ನಡೆದಿದ್ದು, ನಾಗರಹಾವಿಗೆ ತೆಂಗಿನಮರದ ಸುಳಿ ಹಾಗೂ  ಸಂಪಿಗೆ ಮರವೆಂದರೆ ಬಲು ಪ್ರಿಯ. ಈ ಹಿನ್ನಲೆ  ತಾಲೂಕಿನ ಕೊಟ್ಟಿಗೆಹಾರದ ನಿರ್ಮಲ ಎಸ್ಟೇಟಿನ ಲೈನ್ ಮನೆ  ಬಳಿ ನಾಗರಹಾವು ಸಂಪಿಗೆ ಹೂವಿನ ವಾಸನೆ ಹೀರುತ್ತಿದ್ದ ದೃಶ್ಯವನ್ನು ಕಂಡ  ಕಾರ್ಮಿಕರು ಭಯಭೀತರಾಗಿದ್ದರು.
ಈ ವೇಳೆ ಸ್ನೇಕ್ ಆರೀಫ್ ಅವರು ಹಾವನ್ನು  ಸೆರೆ ಹಿಡಿದು  ಅರಣ್ಯಕ್ಕೆ ಬಿಟ್ಟಿದ್ದಾರೆ.