ಜಾನಪದ ಕಲೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಸಾಮಾಜಿಕ ಜಾಲತಾಣಗಳಲ್ಲೂ ಕಾರ್ಯನಿರ್ವಹಿಸುತ್ತಿದೆ :ಡಾ|| ಬಾಲಾಜಿ…

410
firstsuddi

ಚಿಕ್ಕಮಗಳೂರು: ರಾಜ್ಯದಲ್ಲಿ ಜಾನಪದ ಕಲೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಸಾಮಾಜಿಕ ಜಾಲತಾಣಗಳಲ್ಲೂ ಕಾರ್ಯನಿರ್ವಹಿಸುತ್ತಿದೆ ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಡಾ|| ಬಾಲಾಜಿ ಹೇಳಿದರು.ತಾಲ್ಲೂಕು ಕನ್ನಡ ಜಾನಪದ ಪರಿಷತ್ ನಗರದ ಬಿಡಿಆರ್ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ವರ್ಷಗಳಲ್ಲಿ ಓದುವ ಸಂಸ್ಕøತಿ ಮರೆಯಾಗುತ್ತಿದೆ, ಇದರಿಂದಾಗಿ ಜಾನಪದ ಕಲೆ ಮತ್ತು ಸಂಸ್ಕøತಿಯನ್ನು ಜನತೆಗೆ ತಲುಪಿಸಲು ನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಹಾಗೂ ಶಾಲಾ ಕಾಲೇಜುಗಳಲ್ಲೂ ಪರಿಷತ್ತಿನಿಂದ ವಿವಿಧ ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಇದರ ಜೊತೆಗೆ ಯೂ ಟ್ಯೂಬ್‍ನಲ್ಲೂ ಜಾನಪದವನ್ನು 600 ಹಾಡುಗಳ ಮೂಲಕ ಪರಿಚಯಿಸಲಾಗುತ್ತಿದೆ, ಪರಿಷತ್ತಿನಿಂದ ಜಾನಪದ ಎಂಬ ಆಪ್‍ನ್ನು ತೆರೆಯಲಾಗಿದೆ ಎಂದರು.
ಶಾಲಾ ಕಾಲೇಜುಗಳಲ್ಲಿ ಜಾನಪದವನ್ನು ಕಲಿಯಲು ವಿದ್ಯಾರ್ಥಿಗಳು ಬಯಸಿದಲ್ಲಿ ಪರಿಷತ್ತಿನಿಂದ ತರಬೇತುದಾರರನ್ನು ಕಳುಹಿಸಿ ತರಬೇತಿ ನೀಡಲಾಗುವುದು, ಜಾನಪದ ಆಹಾರಗಳನ್ನು ಜನತೆಗೆ ಪರಿಚಯಿಸಲು ಜಾನಪದ ಆಹಾರ ಮೇಳವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಸದ್ಯದಲ್ಲೇ ಒಗಟು ಸ್ಪರ್ಧೆ ಹಾಗೂ ತರೀಕೆರೆಯಲ್ಲಿ ಜಾನಪದ ಸಮ್ಮೇಳನ ನಡೆಸಲಾಗುವುದು ಎಂದ ಅವರು ರಾಜ್ಯದಲ್ಲಿ ಜಾನ ಪದವನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲೂ ಕ್ರೀಡಾ ತರಬೇತುದಾರರಂತೆ ಜಾನಪದ ತರಬೇತುದಾರರನ್ನೂ ನೇಮಿಸಬೇಕು ಎಂದು ಸಲಹೆ ಮಾಡಿದರು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ|| ಮಂಜುಳಾ ಹುಲ್ಲಹಳ್ಳಿ ಮಾತನಾಡಿ ಚಿಕ್ಕಮಗಳೂರು ಜಿಲ್ಲೆ ಜಾನಪದದ ಒಡಲು ಅದನ್ನು ಮಸುಕಾಗಲು ಬಿಡದೆ ಉಳಿಸಿ ಬೆಳೆಸುವ ಸಂಕಲ್ಪವನ್ನು ಇಲ್ಲಿನ ಯುವಪೀಳಿಗೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್ತಿನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಜಾನಪದ ಎಲ್ಲಾ ಸಾಹಿತ್ಯ ಮತ್ತು ಸಂಸ್ಕøತಿಯ ಮೂಲಬೇರು ಅದನ್ನು ಉಳಿಸಿ ಬೆಳೆಸುವ ಕೆಲಸ ಯುವಪೀಳಿಗೆಯಿಂದ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಆರ್.ಜಗದೀಶ್ ಜಿಲ್ಲೆಯ ಎಲ್ಲಾ ಜಾನಪದ ಕಲಾವಿದರನ್ನೂ ಒಗ್ಗೂಡಿಸಿ ನಗರದಲ್ಲಿ ಸದ್ಯದಲ್ಲೇ ಜಾನಪದ ಜಾತ್ರೆ ಆಯೋಜಿಸಲಾಗುವುದು ಎಂದು ತಿಳಿಸಿದರು.
ಪರಿಷತ್ತಿನ ತಾಲ್ಲೂಕು ಮತ್ತು ಜಿಲ್ಲಾ ಘಟಕದಿಂದ ರಾಜ್ಯಾಧ್ಯಕ್ಷ ಡಾ|| ಬಾಲಾಜಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಕೋಶಾಧ್ಯಕ್ಷೆ ಡಾ|| ಕನಕತಾರ, ಜಿಲ್ಲಾ ಸಂಚಾಲಕಿ ಪದ್ಮಾ ತಿಮ್ಮೇಗೌಡ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಾಗರ್ ಮತ್ತು ಪ್ರಮೋದ್ ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರಾಂಶುಪಾಲ ಸೋಮಶೇಖರ್ ಸ್ವಾಗತಿಸಿದರು, ಉಪನ್ಯಾಸಕ ಶಿವಕುಮಾರ್ ವಂದಿಸಿದರು.