ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿ ಯ ನೂತನ ಉಪಾಧ್ಯಕ್ಷರಾಗಿ ಎಂ.ಮಲ್ಲೇಶ್ ಆಯ್ಕೆ…

291
firstsuddi

ಚಿಕ್ಕಮಗಳೂರು : ಟೌನ್ ಕೋ ಆಪರೇಟಿವ್ ಸೊಸೈಟಿ ನೂತನ ಉಪಾಧ್ಯಕ್ಷರಾಗಿ ಎಂ.ಮಲ್ಲೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಇಂದು ನಗರದ ಎಂ.ಜಿ.ರಸ್ತೆಯಲ್ಲಿರುವ ಸಂಘದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಆಯ್ಕೆಯನ್ನು ಘೋಷಿಸಲಾಯಿತು. ನಂತರ ಮಾತನಾಡಿದ ನೂತನ ಉಪಾಧ್ಯಕ್ಷ ಎಂ.ಮಲ್ಲೇಶ್ ಈ ಸೊಸೈಟಿ ಬೆಳೆದು ನೂರಾರು ವರ್ಷಗಳಾಗಿದ್ದು ಈ ಸಂಸ್ಥೆಯಲ್ಲಿ ನನಗೂ ಒಂದು ಉಪಾಧ್ಯಕ್ಷ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯವೆಂದ ಅವರು ನನ್ನ ಆಯ್ಕೆಗೆ ಸಹಕರಿಸಿದ ಎಲ್ಲಾ ನಿರ್ದೇಶಕರಿಗೂ ಧನ್ಯವಾದಗಳು ತಿಳಿಸಿದರು.
ಸೊಸ್ಶೆಟಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೇಶವಮೂರ್ತಿ (ಮೊಗಣ್ಣ) ಮಾತನಾಡಿ ಕಾರ್ಯಕಾರಿ ಮಂಡಳಿ ಸೇರಿ ಉತ್ತಮ ಕೆಲಸ ಮಾಡುವುದರ ಜೊತೆಗೆ ಷೇರುದಾರರು ಹಾಗೂ ಸೊಸ್ಶೆಟಿಯ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಡಾ|| ಡಿ.ಎಲ್.ವಿಜಯ್‍ಕುಮಾರ್ ಅವರು ನೂತನ ಉಪಾಧ್ಯಕ್ಷ ಎಂ.ಮಲ್ಲೇಶ್ ಅವರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸೊಸ್ಶೆಟಿಯ ಅಧ್ಯಕ್ಷ ಎಂ.ಶ್ರೀನಿವಾಸ್, ನಿರ್ದೇಶಕರುಗಳಾದ ಸಿ.ವಿ.ಕುಮಾರ್, ಕೇಶವಮೂರ್ತಿ, ರಾಜಣ್ಣಶೆಟ್ಟಿ, ಅಂಬಿಕಾ, ಹಿರೇಮಗಳೂರು ರಾಮಚಂದ್ರ, ಜಯಂತಿ, ವಕೀಲ ಪ್ರಶಾಂತ್ ಹಾಗೂ ದಂಟರಮಕ್ಕಿ ಗ್ರಾಮಸ್ಥರು ಉಪಸ್ಥಿತರಿದ್ದರು.