ತೀರ್ಥಹಳ್ಳಿ: ಸರ್ಕಾರಿ ಜೂನಿಯರ್ ಕಾಲೇಜು ಬಳಿ ಅಣ್ಣನೊರ್ವ ನನ್ನ ಸಹೋದರಿಯನ್ನು ಪ್ರೀತಿಸ ಬೇಡ ಎಂದಿದ್ದಕ್ಕೆ ಯುವಕನೊರ್ವ ಯುವತಿಯ ಅಣ್ಣನನ್ನೇ ಚಾಕುವಿನಿಂದ ಇರಿದ ಘಟನೆ ನಡೆದಿದ್ದು, ಪ್ರಥಮ ಪಿಯುಸಿ ಓದುತ್ತಿದ್ದ ದರ್ಶನ್ ಗಾಯಗೊಂಡ ಯುವಕ. ಇವನ ತಂಗಿ ಆಶಾ(ಹೆಸರು ಬದಲಾಯಿಸಿದೆ)ಳನ್ನು ಅವಿನ್ ಡಿಸೋಜ ಎಂಬುವನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ದರ್ಶನ್ ಅವಿನ್ ಡಿಸೋಜನಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದಾನೆ. ಇದಕ್ಕೆ ಕುಪಿತಗೊಂಡ ಅವಿನ್ ಡಿಸೋಜ ದರ್ಶನ್ ನನ್ನು ಕಾಲೇಜ್ ನಿಂದ ಹೊರಗಡೆ ಕರೆಸಿ ಅವನಿಗೆ ಚಾಕುವಿನಿಂದ ಹೊಟ್ಟೆಗೆ ಎರಡು ಬಾರಿ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ದರ್ಶನ್ ನನ್ನು ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಅವಿನ್ ಡಿಸೋಜ ಸ್ಥಳದಿಂದ ಪರಾರಿಯಾಗಿದ್ದು, ಪೋಲಿಸರು ಅವಿನ್ ಡಿಸೋಜಗಾಗಿ ಶೋಧ ನಡೆಸುತಿದ್ದಾರೆ.










